ಹೆರಿಗೆ ನೋವು ಕಾಣಿಸಿಕೊಂಡ ಬಳಿಕ ಗರ್ಭಿಣಿಯೋರ್ವರನ್ನು 7 ಕಿಮಿ ದೂರ ಇರುವ ಆಸ್ಪತ್ರೆಗೆ ಹೆಗಲ ಮೇಲೆ ಹೊತ್ತು ಕರೆದೊಯ್ಯುವಾಗ ಮಾರ್ಗಮಧ್ಯೆ ಮಗು ಜನಿಸಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.
ವಿಜಿನಗರಂ : ಹೆರಿಗೆ ನೋವು ಕಾಣಿಸಿಕೊಂಡ ಬಳಿಕ ಗರ್ಭಿಯೋರ್ವರನ್ನು 7 ಕಿಮಿ ದೂರ ಇರುವ ಆಸ್ಪತ್ರೆಗೆ ಹೆಗಲ ಮೇಲೆ ಹೊತ್ತು ಕರೆದೊಯ್ಯುವಾಗ ಮಾರ್ಗಮಧ್ಯೆಗೆ ಮಗು ಜನಿಸಿದೆ.
ಆಕೆಯನ್ನು ಕುಟುಂಬ ಸದಸ್ಯರು ಹೊತ್ತೊಯ್ಯುತ್ತುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಯಾವುದೇ ವಾಹನ ಸಂಚಾರ ಸಾಧ್ಯವಿಲ್ಲದಂತಹ ಪ್ರದೇಶದಲ್ಲಿ ಆಕೆಯನ್ನು ಹೊತ್ತೊಯ್ಯಲಾಗುತ್ತಿತ್ತು. ಆದರೆ ಮಾರ್ಗಮಧ್ಯೆ ಆಕೆಗೆ ನೋವು ಹೆಚ್ಚಾಗಿ ಕಾಣಿಸಿಕೊಂಡ ಪರಿಣಾಮ ದಟ್ಟಕಾಡಿನಲ್ಲಿಯೇ ಮಗು ಜನಿಸಿದೆ.
ಆಂಧ್ರ ಪ್ರದೇಶದ ವಿಜಿನಗರಮ್ ಜಿಲ್ಲೆಯ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಸುಮಾರು 3 ಕಿ.ಮೀ ದೂರ ಸಾಗುತ್ತಿದ್ದಂತೆ ಆಕೆಗೆ ಮಗು ಜನಿಸಿದೆ. ಈ ವೇಳೆ ಕಾಡಿನಲ್ಲಿ ಸಿಗುವ ಕೆಲವು ಸಾಮಾಗ್ರಿಗಳನ್ನು ಬಳಸಿಕೊಂಡೆ ಮಗುವಿನ ಹೊಕ್ಕಳ ಬಳ್ಳಿಯನ್ನು ಹತ್ತರಿಸಲಾಗಿದೆ.
ಸೂಕ್ತ ಸಾರಿಗೆ ಸಂಪರ್ಕ ವ್ಯವಸ್ಥೆ ಇಲ್ಲದ ಪರಿಣಾಮ ಇಂತಹ ಸಮಸ್ಯೆಗಳನ್ನು ತಾವು ಎದುರಿಸುತ್ತಿದ್ದೇವೆ ಎಂದು ಹಳ್ಳಿಗಳು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ.
ಈ ಹಳ್ಳಿಯು ಪಟ್ಟಣದಿಂದ 12 ಕಿ.ಮೀ ದೂರದಲ್ಲಿ ಇದ್ದು ಇಲ್ಲಿ ಯಾವುದೇ ರೀತಿಯ ಸಾರಿಗೆ ಸಂಪರ್ಕ ವ್ಯವಸ್ಥೆ ಇಲ್ಲ ಎನ್ನುತ್ತಾರೆ ಹಳ್ಳಿಗಳು.
