ಚಿಕ್ಕ ವಯಸ್ಸಿನಲ್ಲಿ ಮದುವೆಯಾಗಿ ಗರ್ಭಿಣಿಯಾದ ತುಂಬಾ ಪ್ರಕರಣಗಳು ಬೆಳಕಿಗೆ ಬಂದಿವೆ. ಆದರೆ ಚೀನಾದಲ್ಲಾದ ಈ ಘಟನೆಯನ್ನು ಕೇಳಿ ನೀವು ಶಾಕ್ ಆಗುವುದರೊಂದಿಗೆ ಇದು ಸಾಧ್ಯವೇ ಎಂದು ಯೋಚಿಸಲಾರಂಬಿಸುತ್ತೀರಿ. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ಅಂತೀರಾ? ಹಾಗಾದ್ರೆ ಈ ಸ್ಟೋರಿ ಓದಿ.
ಬೀಜಿಂಗ್(ಜ.24): ಚಿಕ್ಕ ವಯಸ್ಸಿನಲ್ಲಿ ಮದುವೆಯಾಗಿ ಗರ್ಭಿಣಿಯಾದ ತುಂಬಾ ಪ್ರಕರಣಗಳು ಬೆಳಕಿಗೆ ಬಂದಿವೆ. ಆದರೆ ಚೀನಾದಲ್ಲಾದ ಈ ಘಟನೆಯನ್ನು ಕೇಳಿ ನೀವು ಶಾಕ್ ಆಗುವುದರೊಂದಿಗೆ ಇದು ಸಾಧ್ಯವೇ ಎಂದು ಯೋಚಿಸಲಾರಂಬಿಸುತ್ತೀರಿ. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ಅಂತೀರಾ? ಹಾಗಾದ್ರೆ ಈ ಸ್ಟೋರಿ ಓದಿ.
ಚೀನಾದಲ್ಲಿ ನಡೆದಿರುವ ಈ ಪ್ರಕರಣದಲ್ಲಿ 12 ವರ್ಷದ ಬಾಲಕಿಯೊಬ್ಬಳು ಗರ್ಭಿಣಿಯಾಗಿದ್ದಾಳೆ. ಈ ಬಾಲಕಿಯ ಪತಿ ಈಕೆಯನ್ನು ಡಾಕ್ಟರ್ ಬಳಿ ಕರೆದೊಯ್ದಾಗ ಈ ವಿಚಾರ ಬೆಳಕಿಗೆ ಬಂದಿದೆ. ವೈದ್ಯರೂ ಇದನ್ನು ಕಂಡು ಅಚ್ಚರಿಗೀಡಾಗಿದ್ದಲ್ಲದೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಬಾಲಕಿ ಗರ್ಭವತಿಯಾಗಲು ಹೇಗೆ ಸಾಧ್ಯ ಎಂಬುವುದನ್ನು ಯೋಚಿಸುತ್ತಿದ್ದಾರೆ.
ಬಾಲಕಿಗೆ ಕೇವಲ 12 ವರ್ಷ
12 ವರ್ಷದ ಬಾಲಕಿಗೆ 40ರ ಹರೆಯದ ವ್ಯಕ್ತಿಯೊಂದಿಗೆ ಮದುವೆಯಾಗಿತ್ತು. ಆದರೆ ಕಳೆದ ಕೆಲ ದಿನಗಳ ಹಿಂದೆ ಬಾಲಕಿಯ ಆರೋಗ್ಯದಲ್ಲಿ ಏರು ಪೇರಾಗಿತ್ತು ಹೀಗಾಗಿ ಆಕೆಯ ಪತಿ ಬಾಲಕಿಯನ್ನು ವೈದ್ಯರ ಬಳಿ ಕರೆದೊಯ್ದಿದ್ದ. ಈ ವೇಳೆ ಬಾಲಕಿಯನ್ನು ತಪಾಸಣೆಗೈದ ವೈದ್ಯರು ಆಕೆ ಗರ್ಭವತಿಯಾಗಿರುವುದನ್ನು ಖಚಿತಪಡಿಸಿದ್ದಾರೆ ಹಾಗೂ ಸದಯ ಆಕೆ 3 ತಿಂಗಳ ಗರ್ಭಿಣಿ ಎಂದು ತಿಳಿಸಿದ್ದಾರೆ. ಆದರೆ ಅಧಿಕಾರಿಗಳು ಸ್ಥಳಕ್ಕೆ ತಲುಪುತ್ತಿದ್ದಂತೆಯೇ ತನ್ನ ಪತ್ನಿಯ ವಯಸ್ಸು 20 ವರ್ಷ ಎಂದು ಪತಿ ಹೇಳಲಾರಂಭಿಸಿದ್ದಾನೆ. ಆದರೆ ವೈದ್ಯರು ಮಾತ್ರ ಆತನ ಮಾತನ್ನು ನಂಬಲಿಲ್ಲ.
ಬಾಲಕಿ ಗರ್ಭವತಿಯಾಗಿರುವುದನ್ನು ಕಂಡು ಶಾಕ್ ಆದ ವೈದ್ಯರು
ಈ ವಿಚಾರ ತಿಳಿದ ಪೊಲೀಸರು ಬಾಲಕಿಯನ್ನು ತನಿಖೆಗೊಳಪಡಿಸಿದಾಗ ಚೀನಾ ಭಾಷೆ ತಿಳಿಯದ ಆಕೆ ಮಾತೇ ಆಡಿಲ್ಲ ಎಂದು ತಿಳಿದು ಬಂದಿದೆ. ಅಲ್ಲದೆ ಈ ಬಾಲಕಿಯ ಬಳಿ ಆಕೆ ಚೀನಾದವಳೆಂದು ಸಾಬೀತುಪಡಿಸಬಲ್ಲ ಯಾವುದೇ ಗುರುತು ಪತ್ರವೂ ಸಿಕ್ಕಿಲ್ಲ. ಹೀಗಾಘಿ ಈಕೆ ಬೇರೆ ದೇಶದವಳಾಗಿರಬಹುದೆಂದು ಪೊಲೀಸರು ಅನುಮಾನಿಸಿದ್ದಾರೆ. ಅದೇನಿದ್ದರೂ 40 ವರ್ಷದ ವ್ಯಕ್ತಿಯಿಂದ 12ರ ಬಾಲಕಿ ಗರ್ಭಿಣಿಯಾಗಲು ಹೇಗೆ ಸಾಧ್ಯ ಎಂಬುವುದು ವೈದ್ಯರಿಗೆ ಇನ್ನೂ ಬಿಡಸಲಸಾಧ್ಯವಾದ ಒಗಟಾಗಿದೆ.
