ಮಾಜಿ ರಾಷ್ಟ್ರಪತಿ ಪ್ರಣಬ್‌ಗೆ ದೆಹಲಿ ಹೈಕೋರ್ಟ್‌ ನೋಟಿಸ್‌

First Published 7, Apr 2018, 10:24 AM IST
Pratibha Singh J issues Notice to Pranab Mukherjee
Highlights

ಟರ್ಬುಲೆಂಟ್‌ ಇಯರ್ಸ್‌-1980-1996ರ ಪುಸ್ತಕದಲ್ಲಿರುವ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ಅಂಶಗಳನ್ನು ತೆಗೆದು ಹಾಕಬೇಕೆಂಬ ಅರ್ಜಿ ಸಂಬಂಧ ತಮ್ಮ ಅಭಿಪ್ರಾಯ ತಿಳಿಸುವಂತೆ ದೆಹಲಿ ಹೈಕೋರ್ಟ್‌, ಭಾರತದ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರಿಗೆ ಸೂಚನೆ ನೀಡಿದೆ.

ನವದೆಹಲಿ: ಟರ್ಬುಲೆಂಟ್‌ ಇಯರ್ಸ್‌-1980-1996ರ ಪುಸ್ತಕದಲ್ಲಿರುವ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ಅಂಶಗಳನ್ನು ತೆಗೆದು ಹಾಕಬೇಕೆಂಬ ಅರ್ಜಿ ಸಂಬಂಧ ತಮ್ಮ ಅಭಿಪ್ರಾಯ ತಿಳಿಸುವಂತೆ ದೆಹಲಿ ಹೈಕೋರ್ಟ್‌, ಭಾರತದ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರಿಗೆ ಸೂಚನೆ ನೀಡಿದೆ. ಈ ಕುರಿತಾದ ಮುಂದಿನ ವಿಚಾರಣೆಯನ್ನು ಜು.30ಕ್ಕೆ ಮುಂದೂಡಿದೆ.

 ರಾಷ್ಟ್ರಪತಿ ಅವರ ಟರ್ಬುಲೆಂಟ್‌ ಇಯರ್ಸ್‌ ಪುಸ್ತಕದಲ್ಲಿನ 1992ರ ಬಾಬ್ರಿ ಮಸೀದಿ ಧ್ವಂಸ ಘಟನೆ ಮತ್ತು ಇತರ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ಅಂಶಗಳನ್ನು ತೆಗೆದು ಹಾಕಲು ತಿರಸ್ಕರಿಸಿದ ಕೆಳ ನ್ಯಾಯಾಲಯವೊಂದರ ಆದೇಶವನ್ನು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಯು.ಸಿ. ಪಾಂಡೆ ಮತ್ತು ಕೆಲ ವಕೀಲರು ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದರು.

ಈ ಬಗ್ಗೆ ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಾಧೀಶೆ ಪ್ರತಿಭಾ ಎಂ.ಸಿಂಗ್‌, ಪ್ರಣಬ್‌ ಮುಖಜಿಗೆ ತಮ್ಮ ಅಭಿಪ್ರಾಯ ತಿಳಿಸುವಂತೆ ಸೂಚಿಸಿದ್ದಾರೆ.

 

loader