ಇದಕ್ಕೆ ಹಲವು ಮಂದಿ ಉತ್ತರ ನೀಡಿದ್ದು, ಕೆಲವರು ಸಚಿವರನ್ನು ನಿಂದಿಸಿ, ಹೀಯಾಳಿಸಿ ಉತ್ತರಿಸಿದ್ದಾರೆ. ಪ್ರತಾಪ್ ಸಿಂಹರ ಈ ಪೋಸ್ಟ್ ವೈರಲ್ ಆಗಿದ್ದು, ಸಾಕಷ್ಟು ಚರ್ಚೆ ಎಡೆಮಾಡಿಕೊಟ್ಟಿದೆ.

ಧಾರವಾಡ(ಡಿ.07): ಮೈಸೂರು ಸಂಸದ ಪ್ರತಾಪ ಸಿಂಹ ಇದೀಗ ಸಚಿವ ವಿನಯ ಕುಲಕರ್ಣಿ ಕಾಲೆಳೆಯುವ ಯತ್ನ ನಡೆಸಿದ್ದು, ಫೇಸ್‌ಬುಕ್‌ನಲ್ಲಿ ಪ್ರಶ್ನೆಯೊಂದನ್ನು ಮಾಡಿದ್ದಾರೆ. ‘2007ರಲ್ಲಿ ಹುಬ್ಬಳ್ಳಿಯ ಕಿಮ್ಸ್ನಲ್ಲಿ ನಡೆದ ಶೂಟೌಟ್‌ನಲ್ಲಿ ಮುಖ್ಯ ಆರೋಪಿ ಸಹೋದರ ಹಾಗೂ ಕಿಮ್ಸ್ ವೈದ್ಯರ ಕಪಾಳಕ್ಕೆ ಹೊಡೆದಿದ್ದಲ್ಲದೇ ಜಿ.ಪಂ. ಸದಸ್ಯರೊಬ್ಬರ ಹತ್ಯೆಯಲ್ಲಿ ಭಾಗಿಯಾಗಿರುವ

Add Asianetnews Kannada as a Preferred SourcegooglePreferred

ಶಂಕೆ ಎದುರಿಸುತ್ತಿರುವ ಪುಂಡ ಯಾರು?’ ಎಂದು ಸಿಂಹ ರಸಪ್ರಶ್ನೆ ಮಾದರಿಯಲ್ಲಿ ಪ್ರಶ್ನೆಯೊಂದನ್ನು ಫೇಸ್'ಬುಕ್‌ನಲ್ಲಿ ಕೇಳಿದ್ದಾರೆ. ಇದಕ್ಕೆ ಹಲವು ಮಂದಿ ಉತ್ತರ ನೀಡಿದ್ದು, ಕೆಲವರು ಸಚಿವರನ್ನು ನಿಂದಿಸಿ, ಹೀಯಾಳಿಸಿ ಉತ್ತರಿಸಿದ್ದಾರೆ. ಪ್ರತಾಪ್ ಸಿಂಹರ ಈ ಪೋಸ್ಟ್ ವೈರಲ್ ಆಗಿದ್ದು, ಸಾಕಷ್ಟು ಚರ್ಚೆ ಎಡೆಮಾಡಿಕೊಟ್ಟಿದೆ.