ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಎಡ-ಬಲ ಸಂಘರ್ಷ ಮುಂದುವರೆದಿದೆ. ಮೋದಿ ಬಗ್ಗೆ ಮಾತಾಡಿದ ನಟ ಪ್ರಕಾಶ್ ರೈ ಹೇಳಿಕೆಗೆ ಸಂಸದ ಕ್ಕೆ ಪ್ರತಾಪ್ ಸಿಂಹ ತಿರುಗೇಟು ಕೊಟ್ಟಿದ್ದಾರೆ. ಚಿತ್ರಗಳಲ್ಲಿ ಖಳನಟನ ಪಾತ್ರ ಮಾಡ್ತಿರಾ, ನಿಜ ಜೀವನದಲ್ಲು ಅದೆ ರೀತಿ ಆಗ್ಬೇಡಿ. ಇನ್ಮುಂದೆ ಪ್ರಧಾನಿ ಬಗ್ಗೆ ಬೀದಿಯಲ್ಲಿ ಹೇಳಿಕೆ ಕೊಟ್ಟರೆ ಅಂತಹ ಜಾಗದಲ್ಲೇ ಉತ್ತರ ಕೊಡಬೇಕಾಗುತ್ತೆ ಅಂತ ಪ್ರತಾಪ್​​ ಸಿಂಹ ಎಚ್ಚರಿಸಿದ್ರು.

ಬೆಂಗಳೂರು(ಅ.03): ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಎಡ-ಬಲ ಸಂಘರ್ಷ ಮುಂದುವರೆದಿದೆ. ಮೋದಿ ಬಗ್ಗೆ ಮಾತಾಡಿದ ನಟ ಪ್ರಕಾಶ್ ರೈ ಹೇಳಿಕೆಗೆ ಸಂಸದ ಕ್ಕೆ ಪ್ರತಾಪ್ ಸಿಂಹ ತಿರುಗೇಟು ಕೊಟ್ಟಿದ್ದಾರೆ. ಚಿತ್ರಗಳಲ್ಲಿ ಖಳನಟನ ಪಾತ್ರ ಮಾಡ್ತಿರಾ, ನಿಜ ಜೀವನದಲ್ಲು ಅದೆ ರೀತಿ ಆಗ್ಬೇಡಿ. ಇನ್ಮುಂದೆ ಪ್ರಧಾನಿ ಬಗ್ಗೆ ಬೀದಿಯಲ್ಲಿ ಹೇಳಿಕೆ ಕೊಟ್ಟರೆ ಅಂತಹ ಜಾಗದಲ್ಲೇ ಉತ್ತರ ಕೊಡಬೇಕಾಗುತ್ತೆ ಅಂತ ಪ್ರತಾಪ್​​ ಸಿಂಹ ಎಚ್ಚರಿಸಿದ್ರು.

ನೀವು ನಟರಿರಬಹುದು, ನಿಮಗೂ ವಿವೇಚನೆ ಇದೆ ಎನ್ನುವುದನ್ನು ಮರೆಯಬೇಡಿ. ನಿಮಗೆ ಗೌರಿ ಲಂಕೇಶ್ ಹತ್ಯೆ ಮಾತ್ರ ಕಾಣಿಸುತ್ತಿದೆ, ಅದರೆ ಬಿಜೆಪಿ ಕಾರ್ಯಕರ್ತರ ಕೊಲೆ ಕಾಣಿಸುತ್ತಿಲ್ಲವೇ ? ಕೊಲೆ ಆದವರದ್ದು ಜೀವವೇ ಅಲ್ಲವೇ? ಗೌರಿ ಹತ್ಯೆ ಕೆಲವರು ಸಂಭ್ರಮಿಸುತ್ತಿದ್ದಾರೆ ಅಂತ ನೀವು ಪ್ರಶ್ನೆ ಮಾಡ್ತೀರಾ ? ಬಿಜೆಪಿ ಕಾರ್ಯಕರ್ತರು ಕೊಲೆಯಾದಾಗ ನೀವು ಸಂಭ್ರಮಿಸುತ್ತಿದ್ರಾ ಎಂದು ನಾವೂ ಪ್ರಶ್ನಿಸುತ್ತೇವೆ. ಅವತ್ತು ನೀವೂ ಯಾಕೆ ಮಾತಾಡಲಿಲ್ಲ? ಕರ್ನಾಟಕದ ಕಾನೂನು ಸುವ್ಯವಸ್ಥೆ ಬಗ್ಗೆ ಸಿಎಂರನ್ನ ಪ್ರಶ್ನೆ ಮಾಡಿ.‌ ಅದನ್ನ ಬಿಟ್ಟು ಸಂಘ ಪರಿವಾರ ಮೋದಿಯವರನ್ನ ಎಳೆಯಬೇಡಿ ಎಂದಿದ್ದಾರೆ.

ಅಲ್ಲದೆ ಚಿತ್ರಗಳಲ್ಲಿ ಖಳನಟನ ಪಾತ್ರ ಮಾಡ್ತಿರಾ, ನಿಜ ಜೀವನದಲ್ಲೂ ಅದೆ ರೀತಿ ಆಗ್ಬೇಡಿ. ಕಾವೇರಿ ಬಗ್ಗೆ ಕೇಳಿದ್ರೆ ನಟ ಅಂತೀರಿ. ರಾಜ್ಯದಲ್ಲಿ ಕಾವೇರಿ ಬಗ್ಗೆ ಸಮಸ್ಯೆ ಆದ್ರೆ ಸುಮ್ಮನಿರುತ್ತೀರಿ. ತಮಿಳುನಾಡಿನಲ್ಲಿ ಪ್ರಕಾಶ್ ರಾಜ್ ಆದರೆ ಕರ್ನಾಟಕದಲ್ಲಿ ಪ್ರಕಾಶ್ ರೈ ಆಗ್ತಿರಾ. ಹೆಸರು ಬದಲಾಯಿಸಿಕೊಂಡಂತೆ ನಿಮ್ಮ ನಿಲುವುಗಳನ್ನ ಬದಲಾಯಿಸಿಕೊಳ್ಳುತ್ತೀರಾ. ಮತ್ತೊಮ್ಮೆ ಪ್ರಧಾನಿ ಬಗ್ಗೆ ಮಾತನಾಡಿದ್ರೆ ನಿಮ್ಮ ಭಾಷೆಯಲ್ಲೆ ಉತ್ತರ ಕೊಡಬೇಕಾಗುತ್ತೆ ಎಂದು ಕಿಡಿ ಕಾರಿದ್ದಾರೆ.