ಬೆಂಗಳೂರು[ಮೇ.02]: ಲೋಕಸಭಾ ಚುನಾವಣೆ ಬಳಿಕ ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಹಲವು ಬೆಳವಣಿಗೆಗಳ ನಡುವೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮತ್ತು ಸಚಿವ ಡಿ.ಕೆ.ಶಿವಕುಮಾರ್ ಕೆಲ ಸಮಯ ಪ್ರತ್ಯೇಕವಾಗಿ ನಡೆಸಿದ ಮಾತುಕತೆ ಕುತೂಹಲ ಕೆರಳಿಸಿದೆ.

ಈ ನಡುವೆ, ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ಸಚಿವ ಡಿ.ಕೆ.ಶಿವಕುಮಾರ್ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಘಟನೆಯೂ ಎಲ್ಲರ ಗಮನ ಸೆಳೆದಿದೆ. ಮಾಜಿ ಮುಖ್ಯಮಂತ್ರಿ ಎಸ್. ಎಂ.ಕೃಷ್ಣ ಜನ್ಮದಿನ ಪ್ರಯುಕ್ತ ಶುಭಾಶಯ ಕೋರಲು ಬುಧವಾರ ಹಲವು ಮುಖಂಡರು ಡಾಲರ್ಸ್ ಕಾಲೋನಿಯಲ್ಲಿನ ಅವರ ನಿವಾಸಕ್ಕೆ ಆಗಮಿಸಿದರು.

ಸಂಸದ ಪ್ರತಾಪ ಸಿಂಹ ಅವರು ಕೃಷ್ಣ ಅವರಿಗೆ ಶುಭಾಶಯ ಕೋರಿ ಹಿಂತಿರುಗುತ್ತಿದ್ದ ವೇಳೆಗೆ ಸಚಿವ ಡಿ. ಕೆ.ಶಿವಕುಮಾರ್ ಆಗಮಿಸಿದರು. ಈ ವೇಳೆ ಶಿವಕುಮಾರ್ ಅವರ ಕಾಲಿಗೆ ನಮಸ್ಕರಿಸಿ ಪ್ರತಾಪ ಸಿಂಹ ಆಶೀರ್ವಾದ ಪಡೆದರು