ಬಾಲಿವುಡ್ ಭಾರಿ ಬಜೆಟ್ ಚಿತ್ರ ‘ಪದ್ಮಾವತಿ’ ವಿರೋಧಿಸುವ ಭರದಲ್ಲಿ ಬಿಜೆಪಿ ಮಹಾ ಎಡವಟ್ಟು ಮಾಡಿಕೊಂಡಿದೆ. ಸಂಸದ ಪ್ರತಾಪ ಸಿಂಹ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ವೀರ ರಾಣಿ ಕಿತ್ತೂರು ಚೆನ್ನಮ್ಮ, ಒನಕೆ ಓಬವ್ವ ಕುರಿತ ವಿವಾದಾತ್ಮಕ ಪೋಸ್ಟ್'ನಿಂದಾಗಿ ಕಾಂಗ್ರೆಸ್, ಬಿಜೆಪಿ ಕೆಸರೆರಚಾಟಕ್ಕೆ ಕಾರಣವಾಗಿದೆ.
ಬೆಂಗಳೂರು (ನ.29): ಬಾಲಿವುಡ್ ಭಾರಿ ಬಜೆಟ್ ಚಿತ್ರ ‘ಪದ್ಮಾವತಿ’ ವಿರೋಧಿಸುವ ಭರದಲ್ಲಿ ಬಿಜೆಪಿ ಮಹಾ ಎಡವಟ್ಟು ಮಾಡಿಕೊಂಡಿದೆ. ಸಂಸದ ಪ್ರತಾಪ ಸಿಂಹ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ವೀರ ರಾಣಿ ಕಿತ್ತೂರು ಚೆನ್ನಮ್ಮ, ಒನಕೆ ಓಬವ್ವ ಕುರಿತ ವಿವಾದಾತ್ಮಕ ಪೋಸ್ಟ್'ನಿಂದಾಗಿ ಕಾಂಗ್ರೆಸ್, ಬಿಜೆಪಿ ಕೆಸರೆರಚಾಟಕ್ಕೆ ಕಾರಣವಾಗಿದೆ.
ಬಾಲಿವುಡ್ ಪದ್ಮಾವತಿ ಚಿತ್ರಕ್ಕೆ ದೇಶದಲ್ಲಿ ಪರ ವಿರೋಧ ಕೇಳಿ ಬಂದಿದೆ. ಹಾಗೇನೆ ಸ್ಯಾಂಡಲ್'ವುಡ್ ಕೂಡ ಚಿತ್ರದ ಪರ ಧ್ವನಿ ಎತ್ತಿದೆ. ಇದನ್ನ ಖಂಡಿಸುವ ಭರದಲ್ಲಿ ಸಂಸದ ಪ್ರತಾಪ ಸಿಂಹ ಬೆಂಬಲಿಗರು ಕೀಳು ಪದಗಳಿಂದ ನಿಂದಿಸಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಪೋಸ್ಟ್ ಹಾಕಿ ನಾಡಿನ ವೀರ ವನಿತೆಯರನ್ನು ಅವಮಾನಿಸಿದ್ದಾರೆ. ಪ್ರತಾಪ್ ಸಿಂಹ ಬೆಂಬಲಿಗರ ಈ ಪೋಸ್ಟ್ ಗಳಿಗೆ ಕಾಂಗ್ರೆಸ್ ಕಿಡಿ ಕಾರಿದ್ದು, ಬಿಜೆಪಿಗರ ಮನಸು ಕಸದ ತೊಟ್ಟಿಯಿದ್ದಂತೆ ಎಂದು ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ. ಆದರೆ ಬಿಜೆಪಿ ಮಾತ್ರ ಇದು ಕಾಂಗ್ರೆಸ್ ನ ಸಂಚು ಎಂದು ತಿರುಗೇಟು ನೀಡಿದೆ. ಚುನಾವಣೆಗೂ ಮುನ್ನ ಈ ವಿಚಾರ ಬಿಜೆಪಿ-ಕಾಂಗ್ರೆಸ್ ನಡುವಿನ ಕೆಸರೆರಚಾಟಕ್ಕೆ ವೇದಿಕೆಯಾಗಿದೆ.
