ಬೆಂಗಳೂರು(ಸೆ.5) ಸಂಸದ ಪ್ರತಾಪ್ ಸಿಂಹ ಹೆಸರು ಹೇಳದೆ ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರ ಕೆಲಸವನ್ನು ಪ್ರಶ್ನೆ ಮಾಡಿದ್ದಾರೆ. ಬಿಜೆಪಿ ಬಗ್ಗೆ ಮಾತನಾಡುವ ಜೆಡಿಎಸ್ ಮತ್ತು ಕಾಂಗ್ರೆಸ್ ಸಂಸದರು ಏನು ಮಾಡಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ.

ರಾಜ್ಯವನ್ನು ಪ್ರತಿನಿಧಿಸುವ ಸಂಸದರು ಮಾಡಿರುವ ಕೆಲಸದ ಬಗ್ಗೆ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಲಿ. ಬಿಜೆಪಿ ಸಂಸದರು ಎಷ್ಟು ಕೆಲಸ ಮಾಡಿದ್ದಾರೆ ಎಂದು ರಿಪೋರ್ಟ್ ಬಿಡುಗಡೆ ಮಾಡುತ್ತೇವೆ.‌ ನಿಮ್ಮ ಸಂಸದರ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಿಸಿ ಎಂದು ಇತರೆ ಪಕ್ಷದ ಕಾರ್ಯಕರ್ತರಿಗೆ ಪ್ರತಾಪ್ ಸವಾಲು ಹಾಕಿದ್ದಾರೆ.

ನನ್ನ ವಿರುದ್ದ ಕಾಂಗ್ರೆಸ್ ಜೆ.ಡಿ.ಎಸ್. ಪಕ್ಷದವರು ಒಟ್ಟಿಗೆ ನಿಂತು ಸ್ಪರ್ಧಿಗಳನ್ನು ಹಾಕಿ. ಆಗ ಬಿಜೆಪಿ ಶಕ್ತಿ ತೋರಿಸುತ್ತೇವೆ. ಲೋಕಸಭ ಚುನಾವಣೆಗೆ ಸವಾಲು ಸ್ವೀಕರಿಸುತ್ತೇನೆ ಎಂದಿದ್ದಾರೆ.

ಇದೇನು ನಿಮ್ಮನೆ ಟಾಯ್ಲೆಟ್ಟಾ? ಎಫ್‌ಬಿ ಲೈವ್‌ನಲ್ಲಿ ಜಾಡಿಸಿದ ಪ್ರತಾಪ್ ಸಿಂಹ

ಕೊಡಗಿನ ಸಮಸ್ಯೆಗಳ ಬಗ್ಗೆ ಎಲ್ಲರ ಗಮನ ಸೆಳೆಯುವ ಕೆಲಸ ಮಾಡಿದ್ದೇವೆ. ರಾಜ್ಯದ ಎಷ್ಟೋ ಸಂಸದರು ಸಂಸತ್ನಲ್ಲಿ ಒಂದೇ ಒಂದು ಪ್ರಶ್ನೆ ಕೇಳಿಲ್ಲ. ಹೆಸರಿಗೆ ಮಾತ್ರ ರಾಜ್ಯ ಪ್ರತಿನಿಧಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಒಕ್ಕಲಿಗ ಸಮುದಾಯವನ್ನ ಯಾರು ಪೆಟೆಂಟ್ ಪಡೆದಿಲ್ಲ. ಬಿಬಿ ಶಿವಪ್ಪ ಅವರ ಕಾಲದಿಂದದಲೂ ಬಿಜೆಪಿ ಹಾಸನದಲ್ಲಿ ಭದ್ರವಾಗಿದೆ.ಹಾಸನದಲ್ಲಿ ಜೆ ಡಿಎಸ್ ಬೇಸ್ ನಡುಗುತ್ತಿದೆ. ಮಾಜಿ ಪ್ರಧಾನಿ ಕರ್ಮ ಭೂಮಿ ಹಾಸನದಲ್ಲಿಯೆ ಬಿಜೆಪಿ ಅರಳಲಿದೆ ಎಂದಿದ್ದಾರೆ.

ಹುತಾತ್ಮ ಸೈನಿಕರಿಗೆ ನೆರವು ನೀಡುವ ಬಗ್ಗೆಯೂ ಮಾತನಾಡಿರುವ ಪ್ರತಾಪ್ ನಿಮಗೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಅಥವಾ ಕಣ್ಣು ಕಿವಿ ಕಳೆದುಕೊಂಡಿರುವ ಸೈನಿಕರ ಕುಟುಂಬ ನೋವಿನಲ್ಲಿದ್ದರೆ ನನಗೆ ನೇರವಾಗಿ ತಿಳಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.