ಮೈಸೂರು ಕ್ಷೇತ್ರಕ್ಕೆ ಪ್ರತಾಪ್ ಸಿಂಹ ಕೊಡುಗೆ; ಕಿರುಹೊತ್ತಿಗೆ ಬಿಡುಗಡೆ

Pratap Simha released book which describes his achievement
Highlights

ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಕೇಂದ್ರ ಸರ್ಕಾರದ ಕೊಡುಗೆಗಳ ಬಗ್ಗೆ ಸಂಸದ ಪ್ರತಾಪ್ ಸಿಂಹ ವಿವರಣೆ ನೀಡಿದ್ದಾರೆ.  ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳು ನಿಗದಿತ ಅವಧಿಯೊಳಗೆ ಪೂರ್ಣಗೊಳ್ಳಲಿವೆ. ಮೈಸೂರಿಗೆ ನರೇಂದ್ರ ಮೋದಿ 11 ಸಾವಿರ ಕೋಟಿ ಯೋಜನೆ ನೀಡಿದ್ದಾರೆ. ಕರ್ನಾಟಕದ ಯಾವುದೇ ಜಿಲ್ಲೆಗೆ ಕೊಡದಂತಹ ಅನುದಾನ ಮೈಸೂರಿಗೆ ಕೊಟ್ಟಿದ್ದಾರೆ. ಹಿನಕಲ್ ಸಿಗ್ನಲ್ ಗೆ 19 ಕೋಟಿ ವೆಚ್ಚದಲ್ಲಿ ಫ್ಲೈ ಓವರ್‌ ನಿರ್ಮಾಣ ಮಾಡಲಾಗುವುದು. ಮೈಸೂರಿಗೆ ದೇಶದಲ್ಲೇ ಅತಿ ಹೆಚ್ಚು 34 ಜನೌಷಧ ಕೇಂದ್ರಗಳ ಸ್ಥಾಪನೆ, ಮೈಸೂರು ಬೆಂಗಳೂರು ನಡುವೆ 7 ಸಾವಿರ ಕೋಟಿ ವೆಚ್ಚದಲ್ಲಿ 8 ಪಥದ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು   ಪ್ರತಾಪ್ ಸಿಂಹ ಹೇಳಿದರು. 

ಬೆಂಗಳೂರು (ಜು. 07): ಕೇಂದ್ರ ಸರ್ಕಾರದಕ್ಕೆ ನಾಲ್ಕು ವರ್ಷ ತುಂಬಿದ ಹಿನ್ನಲೆಯಲ್ಲಿ  ಕೇಂದ್ರ ಸರ್ಕಾರದ ನಾಲ್ಕು ವರ್ಷದ ಸಾಧನೆ ಬಿಂಬಿಸುವ ಹೊತ್ತಿಗೆಯನ್ನ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಿಡುಗಡೆ ಮಾಡಿದರು. 

ತಮ್ಮ ಸರ್ಕಾರದ ಸಾಧನೆ ಜೊತೆಗೆ ಮೈಸೂರು ಭಾಗಕ್ಕೆ ಪ್ರತಾಪ್ ಸಿಂಹ ಕೊಡುಗೆ ಏನು ಎನ್ನುವ ಬಗ್ಗೆ ಪತ್ರಿಕಾಗೋಷ್ಟಿ ನಡೆಸಿ  ಮೈಸೂರು ಭಾಗದ ಸಾಧನೆ ಬಿಂಬಿಸುವ ಹೊತ್ತಿಗೆ ಬಿಡುಗಡೆ ಮಾಡಿದ್ದಾರೆ. ಮೈಸೂರು ಲೋಕಸಭಾ ಕ್ಷೇತ್ರಕ್ಕೆ ತಂದ ಅನುದಾನಗಳನ್ನ ಬಿಂಬಿಸುವ ಸಮಗ್ರ ಪುಸ್ತಕವನ್ನ ಸಂಸದ ಪ್ರತಾಪ್ ಸಿಂಹ ಯದುವೀರ್’ಗೆ ನೀಡಿದ್ದಾರೆ. 

ಇದೇ ಸಂದರ್ಭದಲ್ಲಿ ಯದುವೀರ್ ಮಾತನಾಡಿ,  ಮೋದಿ ಮತ್ತೆ  ಪ್ರಧಾನಿಯಾಗಬೇಕು.  ಕೇಂದ್ರ ಸರ್ಕಾರಕ್ಕೆ 5 ವರ್ಷ ಸಾಲುವುದಿಲ್ಲ. ನರೇಂದ್ರ ಮೋದಿ ಅವರಿಗೆ ಅಭಿವೃದ್ಧಿ ಕಾರ್ಯಮಾಡಲು ಮತ್ತಷ್ಟು ಕಾಲಾವಕಾಶ ನೀಡಬೇಕು ಎಂದು ಕೇಂದ್ರ ಸರ್ಕಾರದ ಬಗ್ಗೆ  ಯದುವೀರ್  ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಅಟಲ್ ಬಿಹಾರಿ ವಾಜಪೇಯಿ ಕಾಲದ ಜೋಡಿ ರೈಲು ಮಾರ್ಗ ಪೂರ್ಣಗೊಳಿಸಲಾಗಿದೆ.  ಕೇಂದ್ರ ರೈಲ್ವೆ ಸಚಿವ ಸದಾನಂದಗೌಡರ ನೆರವಿನೊಂದಿಗೆ 13 ಕೋಟಿ ವೆಚ್ಚದಲ್ಲಿ ಯೋಜನೆ ಪೂರ್ಣಗೊಳಿಸಲಾಗಿದೆ.  ಮೈಸೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಪಾಸ್ ಪೋರ್ಟ್ ಕೇಂದ್ರ ಸ್ಥಾಪನೆ ಮಾಡಲಾಗಿದೆ.  ಈ ವರೆಗೂ 20 ಸಾವಿರಕ್ಕಿಂತಲೂ ಹೆಚ್ಚು ಜನರಿಗೆ ಪಾಸ್ ಫೋರ್ಡ್ ವಿತರಣೆ ಮಾಡಲಾಗಿದೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ. 

loader