ಸುವರ್ಣನ್ಯೂಸ್ ಜೊತೆ ಮಾತನಾಡಿದ ಪ್ರತಾಪ್ ಸಿಂಹ, ಬಸ್ ಮತ್ತು ಸರಕಾರಿ ಕಚೇರಿಗಳನ್ನು ಮುಚ್ಚಲು ಹೊರಟಿರುವ ಸಿಎಂ ಸಿದ್ದರಾಮಯ್ಯಗೆ ನಾಚಿಕೆಯಾಗಬೇಕು ಎಂದು ಟೀಕಿಸಿದ್ದಾರೆ.
ಬೆಂಗಳೂರು(ನ. 27): ನೋಟ್ ಬ್ಯಾನ್ ನಿರ್ಧಾರವನ್ನು ಪ್ರಶ್ನಿಸಿ ನಾಳೆ ಆಕ್ರೋಶ್ ದಿನ್ ಆಚರಣೆಗೆ ಕರೆಕೊಟ್ಟಿರುವ ಕಾಂಗ್ರೆಸ್ ಪಕ್ಷವನ್ನು ಬಿಜೆಪಿ ಮುಖಂಡರು ತೀವ್ರವಾಗಿ ಟೀಕಿಸಿದ್ದಾರೆ. ಪ್ರತಾಪ್ ಸಿಂಹ ಅವರಂತೂ ಇದನ್ನು ಹತಾಶೆಯ ದಿನವೆಂದು ಬಣ್ಣಿಸಿದ್ದಾರೆ. ಕಪ್ಪುಹಣ ಇಟ್ಟುಕೊಂಡವರಿಗೆ ನೋಟು ನಿಷೇಧದಿಂದ ತೊಂದರೆಯಾಗಿದೆ. ನ.8ರ ರಾತ್ರಿಯಿಂದಲೇ ದೇಶಾದ್ಯಂತ ಸಂಭ್ರಮದ ದಿನಗಳು ಆರಂಭವಾಗಿವೆ ಎಂದು ಮೈಸೂರಿನ ಬಿಜೆಪಿ ಸಂಸದರಾದ ಪ್ರತಾಪ್ ಸಿಂಹ ಅಭಿಪ್ರಾಯಪಟ್ಟಿದ್ದಾರೆ.
ಸುವರ್ಣನ್ಯೂಸ್ ಜೊತೆ ಮಾತನಾಡಿದ ಪ್ರತಾಪ್ ಸಿಂಹ, ಬಸ್ ಮತ್ತು ಸರಕಾರಿ ಕಚೇರಿಗಳನ್ನು ಮುಚ್ಚಲು ಹೊರಟಿರುವ ಸಿಎಂ ಸಿದ್ದರಾಮಯ್ಯಗೆ ನಾಚಿಕೆಯಾಗಬೇಕು. ಸಾರ್ವಜನಿಕರ ಬೆಂಬಲವೇ ಇಲ್ಲದೆ ನಡೆಯುವ ನಾಳೆಯ ಭಾರತ್ ಬಂದ್ ವಿಫಲವಾಗಲಿದೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
