ದೇವಿ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವಿಸಿ ಮೃತಪಟ್ಟವರಲ್ಲಿ ಬಿದರಹಳ್ಳಿಯ ಬಾಲಕ ಪ್ರೀತಂ ಕೂಡ ಸೇರಿದ್ದಾನೆ. ಈತ ಪೋಷಕರ ಕಣ್ತಪ್ಪಿಸಿ ಪ್ರಸಾದ ಸೇವಿಸಿದ ಬಾಲಕ ತನ್ನ ಜನ್ಮ ದಿನದಂದೇ ಮೃತಪಟ್ಟಿದ್ದಾನೆ.

ಕೊಳ್ಳೇಗಾಲ: ಮಾರಮ್ಮ ದೇವಿ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವಿಸಿ ಮೃತಪಟ್ಟವರಲ್ಲಿ ಬಿದರಹಳ್ಳಿಯ ಬಾಲಕ ಪ್ರೀತಂ ಕೂಡ ಸೇರಿದ್ದಾನೆ. ಈತ ಪೋಷಕರ ಕಣ್ತಪ್ಪಿಸಿ ಪ್ರಸಾದ ಸೇವಿಸಿ ಈಗ ಇಹಲೋಕ ತ್ಯಜಿಸಿದ್ದಾನೆ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರೀತಂ ತಂದೆ ಶೇಖರ್‌ ಮತ್ತು ತಾಯಿ ರೇಖಾ ಓಂ ಶಕ್ತಿ ದೇವಸ್ಥಾನಕ್ಕೆ ತೆರಳಲು ಮಾಲೆ ಧರಿಸಿದ್ದರು. ಶುಕ್ರವಾರ ಪ್ರೀತಂ ಹುಟ್ಟುಹಬ್ಬದ ದಿನವಾಗಿದ್ದ ಹಿನ್ನೆಲೆಯಲ್ಲಿ ಮಾರಮ್ಮನ ದೇವಸ್ಥಾನದಲ್ಲಿ ಶೇಖರ್‌ ದಂಪತಿ ಕುಟುಂಬ ಸಮೇತ ಪೂಜೆ ಸಲ್ಲಿಸಿದ್ದರು.

ಈ ವೇಳೆ ನೀಡಲಾದ ಪ್ರಸಾದ ಏನೋ ಘಾಟು ಹೊಡೆಯುತ್ತಿದ್ದುದರಿಂದ ಶೇಖರ್‌ ಅವರು ಪ್ರಸಾದ ಸೇವಿಸದಂತೆ ಮಕ್ಕಳಿಗೆ ತಾಕೀತು ಮಾಡಿದ್ದರು. ಆದರೂ ಮೂರನೇ ಮಗನಾದ ಪ್ರೀತಂ ಅಪ್ಪ-ಅಮ್ಮನ ಕಣ್ತಪ್ಪಿಸಿ ಪ್ರಸಾದ ಸೇವಿಸಿದ್ದ.