ಪ್ರಣಬ್ ಮುಖರ್ಜಿಗೆ ಕಾಂಗ್ರೆಸಿಗರ ವಿರೋಧ

news | Thursday, June 7th, 2018
Suvarna Web Desk
Highlights

 ಕಾಂಗ್ರೆಸ್‌ನ ಹಿರಿಯ ನಾಯಕ, ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ,  ಇಂದು ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್‌ನ ಹೊಸ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. 

ನಾಗಪುರ: ಕಾಂಗ್ರೆಸ್‌ನ ಹಿರಿಯ ನಾಯಕ, ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ,  ಇಂದು ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್‌ನ ಹೊಸ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಆರ್‌ಎಸ್‌ಎಸ್‌ನ ಕಾರ್ಯಕ್ರಮದಲ್ಲಿ ಸಮಾಜದ ಗಣ್ಯರು ಭಾಗವಹಿಸುವುದು ಹೊಸದಲ್ಲವಾದರೂ, ಕಾಂಗ್ರೆಸ್‌ ಬಹುವಾಗಿ ವಿರೋಧಿಸುವ ಸಂಘಟನೆಯ ಕಾರ್ಯಕ್ರಮವೊಂದರಲ್ಲಿ ಅವರದ್ದೇ ಪಕ್ಷದ ಅತ್ಯುನ್ನತ ನಾಯಕರ ಪೈಕಿ ಒಬ್ಬರಾದ ಪ್ರಣಬ್‌ ಭಾಗವಹಿಸುತ್ತಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಹೀಗಾಗಿಯೇ ಗುರುವಾರ ಅವರು ತಮ್ಮ ಭಾಷಣದಲ್ಲಿ ಯಾವ್ಯಾವ ಸಂಗತಿಗಳನ್ನು ಉಲ್ಲೇಖಿಸಿ ಮಾತನಾಡಬಹುದು, ಅದರಲ್ಲಿ ರಾಜಕೀಯ ಇರಲಿದೆಯೇ? ಇಲ್ಲವೇ ಎಂಬೆಲ್ಲಾ ಕುತೂಹಲ ಇಡೀ ದೇಶದ ಜನರಲ್ಲಿ ಕಾಡಿದೆ. ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿಟ್ಟಿನಲ್ಲಿ ಪ್ರಣಬ್‌ ಅವರು ಬುಧವಾರವೇ ನಾಗಪುರಕ್ಕೆ ಆಗಮಿಸಿದ್ದಾರೆ.

ಈ ನಡುವೆ ಕಾರ್ಯಕ್ರಮದಲ್ಲಿ ಪ್ರಣಬ್‌ ಭಾಗಿಯಾಗುವುದನ್ನು ವಿರೋಧಿಸುತ್ತಿರುವ ಕಾಂಗ್ರೆಸ್‌ ನಾಯಕರ ಬಗ್ಗೆ ಆರ್‌ಎಸ್‌ಎಸ್‌ ನಾಯಕ ಮನಮೋಹನ್‌ ವೈದ್ಯ ತೀವ್ರವಾಗಿ ಟೀಕಿಸಿದ್ದಾರೆ. ಅತ್ಯಂತ ಹಿರಿಯ ನಾಯಕರೊಬ್ಬರ ಬಗ್ಗೆ ಅವರದ್ದೇ ಪಕ್ಷದ ಕಿರಿಯ ನಾಯಕರು ಪ್ರಶ್ನೆ ಮಾಡುತ್ತಿರುವುದು ಅಸಹಿಷ್ಣುತೆ. ತಮ್ಮದೇ ನಾಯಕನ ವಾಕ್‌ ಸ್ವಾತಂತ್ರ್ಯವನ್ನು ಕಾಂಗ್ರೆಸ್‌ ಪ್ರಶ್ನಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಏನೀ ಕಾರ್ಯಕ್ರಮ:

ಆರೆಸ್ಸೆಸ್‌ಗೆ ಹೊಸದಾಗಿ ಸೇರಿಕೊಂಡವರಿಗೆ ‘ಸಂಘ ಶಿಕ್ಷಾ ವರ್ಗ’ ಎಂಬ 25 ದಿನಗಳ ತರಬೇತಿ ಶಿಬಿರವನ್ನು ನಾಗಪುರದ ಕೇಂದ್ರ ಕಚೇರಿಯಲ್ಲಿ ಏರ್ಪಡಿಸಲಾಗಿದೆ. ಇದರ ತೃತೀಯ ವರ್ಷದ ಸಮಾರೋಪ ಇಂದು ನಡೆಯಲಿದೆ. ಈ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಬರಬೇಕು ಎಂದು ಸಂಘವು ಪ್ರಣಬ್‌ ಅವರಿಗೆ ಕೇಳಿಕೊಂಡಿತ್ತು. ಇದಕ್ಕೆ ಪ್ರಣಬ್‌ ಒಪ್ಪಿದ್ದರು. ಆದರೆ ಪ್ರಣಬ್‌ ನಡೆಯನ್ನು ಅನೇಕ ಕಾಂಗ್ರೆಸ್ಸಿಗರು ವಿರೋಧಿಸಿ, ಪಾಲ್ಗೊಳ್ಳದಂತೆ ಪತ್ರ ಬರೆದಿದ್ದಾರೆ. ಆದಾಗ್ಯೂ ‘ನಾನು ಈ ಎಲ್ಲ ಪತ್ರಗಳಿಗೆ ನಾಗಪುರದಲ್ಲೇ ಉತ್ತರ ಕೊಡುವೆ’ ಎನ್ನುವ ಮೂಲಕ ಸಮಾರಂಭದಲ್ಲಿ ಪಾಲ್ಗೊಳ್ಳುವುದನ್ನು ಅವರು ದೃಢಪಡಿಸಿದ್ದರು.

Comments 0
Add Comment

  Related Posts

  Ex Mla Refuse Congress Ticket

  video | Friday, April 13th, 2018

  Congress First short List soon release

  video | Tuesday, April 10th, 2018

  Ex Mla Refuse Congress Ticket

  video | Friday, April 13th, 2018
  Sujatha NR