Asianet Suvarna News Asianet Suvarna News

2019ರ ಲೋಕಸಭಾ ಚುನಾವಣೆ : ಮುಂದಿನ ಪ್ರಧಾನಿ ಪ್ರಣಬ್

2019ರ ಲೋಕಸಭೆ ಚುನಾವಣೆಯಲ್ಲಿ ಬಹುಮತ ಪಡೆಯುವಲ್ಲಿ ಬಿಜೆಪಿ ವಿಫಲವಾದರೆ ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರು ಪ್ರಧಾನಿ ಹುದ್ದೆಗೆ ಸರ್ವಸಮ್ಮತ ಅಭ್ಯರ್ಥಿಯಾಗಬಹುದು ಎಂದು ಬಿಜೆಪಿಯ ಮಿತ್ರಪಕ್ಷ ಶಿವಸೇನೆ ಭವಿಷ್ಯ ನುಡಿದಿದೆ.

Pranab Mukherjee could be consensus PM candidate if BJP lacks

ಮುಂಬೈ: 2019ರ ಲೋಕಸಭೆ ಚುನಾವಣೆಯಲ್ಲಿ ಬಹುಮತ ಪಡೆಯುವಲ್ಲಿ ಬಿಜೆಪಿ ವಿಫಲವಾದರೆ ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರು ಪ್ರಧಾನಿ ಹುದ್ದೆಗೆ ಸರ್ವಸಮ್ಮತ ಅಭ್ಯರ್ಥಿಯಾಗಬಹುದು ಎಂದು ಬಿಜೆಪಿಯ ಮಿತ್ರಪಕ್ಷ ಶಿವಸೇನೆ ಭವಿಷ್ಯ ನುಡಿದಿದೆ.

ಇದೇ ವೇಳೆ, ದಿವಂಗತ ಬಾಳಾ ಠಾಕ್ರೆ ಅವರಿಗೆ ಒಮ್ಮೆಯೂ ಈ ರೀತಿಯ ಕಾರ್ಯಕ್ರಮಕ್ಕೆ ಆಹ್ವಾನ ನೀಡದಿದ್ದುದಕ್ಕಾಗಿ ಆರ್‌ಎಸ್‌ಎಸ್‌ ಅನ್ನು ತರಾಟೆಗೆ ತೆಗೆದುಕೊಂಡಿದೆ. ಇಫ್ತಾರ್‌ ಕೂಟಗಳನ್ನು ಆಯೋಜಿಸುವ ಮೂಲಕ ಆರೆಸ್ಸೆಸ್‌ ಮುಸ್ಲಿಮರನ್ನು ಓಲೈಸುತ್ತಿದೆ ಎಂದು ತನ್ನ ಮುಖವಾಣಿ ‘ಸಾಮ್ನಾ’ದಲ್ಲಿ ಸಂಪಾದಕೀಯ ಬರೆದು ಟೀಕಿಸಿದೆ. 

ಪ್ರಣಬ್‌ ಅವರನ್ನು ಆರೆಸ್ಸೆಸ್‌ ತನ್ನ ಕೇಂದ್ರ ಕಚೇರಿಗೆ ಆಹ್ವಾನಿಸಿದ್ದರ ಹಿಂದಿನ ಅಜೆಂಡಾ ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆ ವೇಳೆ ಬಹಿರಂಗವಾಗಲಿದೆ ಎಂದು ಹೇಳಿದೆ.

Follow Us:
Download App:
  • android
  • ios