Asianet Suvarna News Asianet Suvarna News

ಭಾರೀ ಹಗರಣದ ಸುಳಿಯಲ್ಲಿ ಸಚಿವ ಪ್ರಮೋದ್‌ ಮಧ್ವರಾಜ್‌!

ಚುನಾವಣೆ ಹೊಸ್ತಿಲಲ್ಲೇ ರಾಜ್ಯ ಕ್ರೀಡಾ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್‌ ಮಧ್ವರಾಜ್‌ ಅವರ ಮೇಲೀಗ ಬ್ಯಾಂಕಿಂಗ್‌ ಹಗರಣದ ಆರೋಪ ಕೇಳಿಬಂದಿದೆ. ಸಚಿವರ .1.10 ಕೋಟಿ ಮೌಲ್ಯದ ಜಮೀನಿಗೆ ಸಿಂಡಿಕೇಟ್‌ ಬ್ಯಾಂಕ್‌ನಿಂದ .193 ಕೋಟಿ ಸಾಲ ನೀಡಲಾಗಿದೆ. ಇದರಲ್ಲಿ ಭಾರೀ ಅಕ್ರಮ ನಡೆದಿದೆ ಎಂಬ ಆರೋಪ ಮಾಡಲಾಗಿದೆ.

Pramod Madwaraj Big Scam

ನವದೆಹಲಿ : ಚುನಾವಣೆ ಹೊಸ್ತಿಲಲ್ಲೇ ರಾಜ್ಯ ಕ್ರೀಡಾ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್‌ ಮಧ್ವರಾಜ್‌ ಅವರ ಮೇಲೀಗ ಬ್ಯಾಂಕಿಂಗ್‌ ಹಗರಣದ ಆರೋಪ ಕೇಳಿಬಂದಿದೆ. ಸಚಿವರ .1.10 ಕೋಟಿ ಮೌಲ್ಯದ ಜಮೀನಿಗೆ ಸಿಂಡಿಕೇಟ್‌ ಬ್ಯಾಂಕ್‌ನಿಂದ .193 ಕೋಟಿ ಸಾಲ ನೀಡಲಾಗಿದೆ. ಇದರಲ್ಲಿ ಭಾರೀ ಅಕ್ರಮ ನಡೆದಿದೆ ಎಂಬ ಆರೋಪ ಮಾಡಲಾಗಿದೆ.

ಈ ಸಂಬಂಧ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಅವರು ಕೇಂದ್ರ ಹಣಕಾಸು ಸಚಿವಾಲಯ ಮತ್ತು ಭಾರತೀಯ ರಿಸವ್‌ರ್‍ ಬ್ಯಾಂಕ್‌ಗೆ ದೂರು ಸಲ್ಲಿಸಿದ್ದು, ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ ಕಡಿಮೆ ಮೌಲ್ಯದ ಆಸ್ತಿಯ ಮೇಲೆ ಭಾರಿ ಮೊತ್ತದ ಸಾಲ ಪಡೆದಿದ್ದಾರೆ. ಉಡುಪಿ ನಗರದ ಹೊರವಲಯದಲ್ಲಿರುವ ಜಾಗವೊಂದಕ್ಕೆ ಚದರಡಿ ಜಮೀನಿಗೆ .19,000 ಗಳಷ್ಟುಸಾಲವನ್ನು ಸಚಿವರಿಗೆ ನೀಡಲಾಗಿದೆ. ಈ ಅವ್ಯವಹಾರದಲ್ಲಿ ಮಲ್ಪೆಯ ಸಿಂಡಿಕೇಟ್‌ ಬ್ಯಾಂಕ್‌ನ ಮ್ಯಾನೇಜರ್‌ ಅವರ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ಜತೆಗೆ, ಈ ಅವ್ಯವಹಾರಕ್ಕೆ ಸಂಬಂಧಿಸಿ ಭಾರತೀಯ ದಂಡ ಸಂಹಿತೆಯ 107, 112, 403, 412, 420, 225 ಸೆಕ್ಷನ್‌ಗಳಡಿ ಮೊಕದ್ದಮೆ ಹೂಡಬೇಕು ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಮತ್ತು ಆರ್‌ಬಿಐ ಗವರ್ನರ್‌ಗೆ ಬರೆದಿರುವ ಪತ್ರದಲ್ಲಿ ಅಬ್ರಹಾಂ ಮನವಿ ಮಾಡಿಕೊಂಡಿದ್ದಾರೆ.

ಮಲ್ಟಿಪಲ್‌ ಲೋನ್‌ ಆರೋಪ: ಉಡುಪಿಯ ಬ್ರಹ್ಮಾವರದ ಬಳಿಯ ಉಪ್ಪೂರು ಗ್ರಾಮದಲ್ಲಿರುವ ಸಚಿವರ ಒಟ್ಟು 3.08 ಎಕರೆ ಜಮೀನಿಗೆ ಇಷ್ಟೊಂದು ಪ್ರಮಾಣದಲ್ಲಿ ಸಾಲ ನೀಡಲಾಗಿದೆ. ಜಮೀನಿನ ಮೌಲ್ಯವನ್ನು ಮೇಲಂದಾಜು ಮಾಡಿರುವುದು ಮಾತ್ರವಲ್ಲದೆ ಒಂದೇ ಜಮೀನಿಗೆ ಪ್ರತ್ಯೇಕವಾಗಿ (ಮಲ್ಟಿಪಲ…) ಸಾಲ ನೀಡಲಾಗಿದೆ. ಈ ಷಡ್ಯಂತ್ರದಲ್ಲಿ ಪ್ರಮೋದ್‌ ಅವರೊಂದಿಗೆ ಬ್ಯಾಂಕ್‌ ಮ್ಯಾನೇಜರ್‌ ಕೂಡ ಶಾಮೀಲಾಗಿದ್ದಾರೆ. ಹಣಕಾಸು ಸಚಿವಾಲಯ ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಅಬ್ರಹಾಂ ಆಗ್ರಹಿಸಿದ್ದಾರೆ.

ಅಬ್ರಹಾಂ ಹೇಳೋದೇನು?: ಉಪ್ಪೂರು ಗ್ರಾಮದ ಸರ್ವೆ ನಂ.206/ಪಿ4ರ 72 ಸೆಂಟ್ಸ್‌ (100 ಸೆಂಟ್ಸ್‌ ಅಂದರೆ 1 ಎಕರೆ) ಜಮೀನಿಗೆ ಸುಮಾರು .34.50 ಕೋಟಿ, ಸರ್ವೆ ನಂ. 206/1ಪಿ2 ರಲ್ಲಿನ 18 ಸೆಂಟ್ಸ್‌ ಜಮೀನಿಗೆ ಎರಡು ಬಾರಿ ತಲಾ .34.50 ಕೋಟಿ (ಒಟ್ಟು .69 ಕೋಟಿ), ಸರ್ವೆ ನಂ 303/5ಪಿ1 ರಲ್ಲಿನ 2 ಎಕರೆ ಜಮೀನಿಗೆ ಒಟ್ಟು ನಾಲ್ಕು ಬಾರಿ .89.50 ಕೋಟಿ ಸಾಲ ನೀಡಲಾಗಿದೆ. ಆದರೆ ಈ ಜಮೀನುಗಳ ವಾಸ್ತವ ಮೌಲ್ಯ ಇದಕ್ಕಿಂತ ತುಂಬಾ ಕಡಿಮೆ ಇದೆ.

ಸರ್ವೆ ನಂ.206/ಪಿ4ರ 72 ಸೆಂಟ್ಸ್‌ ಜಮೀನಿಗೆ .27,20,000, ಸರ್ವೆ ನಂ 206/1ಪಿ2 ರಲ್ಲಿನ 18 ಸೆಂಟ್ಸ್‌ಗೆ .6,80,000, ಸರ್ವೆ ನಂ 206/1ಪಿ2 ರಲ್ಲಿನ 18 ಸೆಂಟ್ಸ್‌ಗೆ .6,80,000 ಹಾಗೂ ಸರ್ವೆ ನಂ 303/5ಪಿ1 ರಲ್ಲಿನ 2 ಎಕರೆ ಜಮೀನಿಗೆ ಒಟ್ಟು .70,00,000 ಮೌಲ್ಯ ಕಟ್ಟಬೇಕಿತ್ತು. ಈ ಮೂರು ಎಕರೆ 8 ಸೆಂಟ್ಸ್‌ ಒಟ್ಟು .1,10,80,000 ಮೌಲ್ಯ ಹೊಂದಿತ್ತು ಎಂದು ಖುದ್ದು ಪ್ರಮೋದ್‌ ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ಹೇಳಿದ್ದರು ಎಂದು ಅಬ್ರಹಾಂ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅಷ್ಟೇ ಅಲ್ಲದೆ, ಜಮೀನಿಗೆ ನೀಡಿರುವ ಪಹಣಿ ಪತ್ರದ ದಾಖಲೆ ಪರಿಶೀಲನೆ ನಡೆಸಿದಾಗ ಒಂದೇ ಜಾಗಕ್ಕೆ ಅನೇಕ ಬಾರಿ ಸಾಲ ಪಡೆದಿರುವುದು ಬೆಳಕಿಗೆ ಬಂದಿದೆ. ಸರ್ವೆ ನಂ. 206/1ಪಿ2 ರಲ್ಲಿನ 0.18 ಸೆಂಟ್ಸ್‌ ಜಮೀನಿಗೆ ಎರಡು ಬಾರಿ ಒಂದೇ ಪ್ರಮಾಣದ ಹಾಗೆಯೇ ಸರ್ವೆ ನಂ.303/5ಪಿ1 ರಲ್ಲಿನ 2 ಎಕರೆ ಜಮೀನಿಗೆ ಒಟ್ಟು ನಾಲ್ಕು ಬಾರಿ ಸಾಲ ಪಡೆಯಲಾಗಿದೆ. ಆದರೆ ಈ ಸಾಲದ ಪ್ರಮಾಣದಲ್ಲಿ ಅಜಗಜಾಂತರ ವ್ಯತ್ಯಾಸಗಳಿವೆ. ಈ ಜಮೀನಿಗೆ ಒಮ್ಮೆ .10 ಕೋಟಿ, .40 ಕೋಟಿ, .5 ಕೋಟಿ ಹಾಗೆಯೇ ಇನ್ನೊಮ್ಮೆ .34.50 ಕೋಟಿ ಸಾಲ ನೀಡಲಾಗಿದೆ. ಹೀಗಾಗಿ ಪ್ರಮೋದ್‌ ಮಧ್ವರಾಜ್‌ ಅವರು ಬ್ಯಾಂಕ್‌ನ ಅಧಿಕಾರಿಗಳೊಂದಿಗೆ ಸೇರಿ ಕ್ರಿಮಿನಲ… ಸಂಚು ನಡೆಸಿ ಸಾರ್ವಜನಿಕ ಹಣ ಮತ್ತು ಬ್ಯಾಂಕ್‌ಗೆ ವಂಚನೆ ಎಸಗಿದ್ದಾರೆ ಎಂದು ದೂರಲ್ಲಿ ಹೇಳಲಾಗಿದೆ.

ಮಿನಿ ನೀರವ್‌ ಮೋದಿ ಪ್ರಕರಣ: ಇದು ಪಂಜಾಬ… ನ್ಯಾಷನಲ… ಬ್ಯಾಂಕ್‌ಗೆ ವಂಚಿಸಿದ ನೀರವ್‌ ಮೋದಿ ಪ್ರಕರಣದ ಕಿರು ರೂಪ. ಜಮೀನಿನ ಮೌಲ್ಯದ ಎರಡೋ, ಮೂರೋ ಪಟ್ಟು ಹೆಚ್ಚು ಸಾಲ ನೀಡುವುದೇ ತಪ್ಪು. ಆದರೆ ಇಲ್ಲಿ ಹತ್ತಾರು ಪಟ್ಟು ಹೆಚ್ಚು ಸಾಲ ನೀಡಲಾಗಿದೆ. ಇಲ್ಲಿ ಅಕ್ರಮ ನಡೆದಿರುವುದು ಸ್ಪಷ್ಟವಾಗಿದ್ದು ಕ್ರಿಮಿನಲ… ಮೊಕದ್ದಮೆ ಹೂಡಬೇಕು ಎಂದು ಅಬ್ರಾಹಾಂ ಆಗ್ರಹಿಸಿದ್ದಾರೆ.

ಉಡುಪಿ  ಹೊರವಲಯದಲ್ಲಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರಿಗೆ ಸೇರಿದ 3.08 ಎಕರೆ ಜಮೀನಿದೆ. ಇದರ ಮೌಲ್ಯ .1.10 ಕೋಟಿ. ಆದರೆ, ಈ ಜಮೀನಿಗೆ ಸಿಂಡಿಕೇಟ್‌ ಬ್ಯಾಂಕ್‌ನಿಂದ .193 ಕೋಟಿ ಸಾಲ ನೀಡಲಾಗಿದೆ. ಅದೇ ಜಮೀನಿಗೆ ಒಂದಕ್ಕಿಂತ ಹೆಚ್ಚು ಬಾರಿ ಸಾಲ ಪಡೆಯಲಾಗಿದೆ. ಚದರಡಿಗೆ 19 ಸಾವಿರ ರು.ಗಳಂತೆ ಸಾಲ ನೀಡಲಾಗಿದೆ. ಇದು ಮಿನಿ ನೀರವ್‌ ಮೋದಿ ಪ್ರಕರಣ ಎಂಬುದು ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಆರೋಪ.

 

ಹಿಂದೆ ಫಿಶ್‌ ಮಿಲ್‌ಗೆ ಸಾಲ ತೆಗೆದುಕೊಂಡಿದ್ದರು. ಈ ಸಾಲ ಹೇಗೆ ಕೊಟ್ಟರು ಎನ್ನುವುದೇ ಗೊತ್ತಿಲ್ಲ. ನನ್ನ ಗಮನಕ್ಕೆ ಬಂದಿಲ್ಲ. ಬೆಂಗಳೂರಿನ ಹೆಡ್‌ ಆಫೀಸ್‌ನಿಂದಲೇ ಈ ಸಾಲದ ವ್ಯವಹಾರ ನಡೆದಿರಬೇಕು. ಪ್ರಮೋದ್‌ ಅವರ ಖಾತೆ ಬ್ಯಾಂಕಿನ ಮಲ್ಪೆ ಶಾಖೆಯಲ್ಲಿರುವುದು. ಹಾಗಾಗಿ ಮಲ್ಪೆ ಶಾಖೆ ಹೆಸರು ಪ್ರಸ್ತಾಪವಾಗಿದೆ. ಅಷ್ಟುಕಡಿಮೆ ಮೊತ್ತದ ಷ್ಯೂರಿಟಿಗೆ ಇಷ್ಟುಮೊತ್ತದ ಸಾಲ ಹೇಗೆ ಕೊಟ್ಟಿದ್ದಾರೆ ಎನ್ನುವುದೇ ಅಚ್ಚರಿ ವಿಚಾರ.

- ಹೆಸರು ಹೇಳಲಿಚ್ಛಿಸದ ಸಿಂಡಿಕೇಟ್‌ ಬ್ಯಾಂಕ್‌ ವಲಯ ಮಟ್ಟದ ಅಧಿಕಾರಿ

ಕೇಂದ್ರ ಸರ್ಕಾರವೇ ತನಿಖೆ ನಡೆಸಲಿ

ಇದು ವಿಶ್ವದ ಅತಿ ದೊಡ್ಡ ಸುಳ್ಳು. ಸಿಂಡಿಕೇಟ್‌ ಬ್ಯಾಂಕ್‌ ಕೇಂದ್ರ ಸರ್ಕಾರದ ಅಧೀನದಲ್ಲಿರುವುದರಿಂದ ಕೇಂದ್ರ ಸರ್ಕಾರವೇ ಈ ಬಗ್ಗೆ ತನಿಖೆ ಮಾಡಲಿ. ಬ್ಯುಸಿನೆಸ್‌ಗಾಗಿ ಈ ಸಾಲ ಮಾಡಿದ್ದೇನೆ. ಸಾಲ ಪಡೆಯುವುದಕ್ಕೆ ಬ್ಯಾಂಕ್‌ಗೆ ಎಷ್ಟುಮೊತ್ತದ ಆಸ್ತಿ ಪತ್ರಗಳನ್ನು ಇಡಬೇಕೋ ಅಷ್ಟುಮೊತ್ತದ ದಾಖಲೆಗಳ್ನು ಅಡವಿಟ್ಟಿದ್ದೇನೆ. ಅದರ ಆಧಾರದ ಮೇಲೆ ಸಾಲ ನೀಡಿದ್ದಾರೆ. ಇಲ್ಲಿ ಯಾವುದೇ ವಂಚನೆ ಆಗಿಲ್ಲ.

- ಪ್ರಮೋದ್‌ ಮಧ್ವರಾಜ್‌, ಕ್ರೀಡಾ ಸಚಿವ

Follow Us:
Download App:
  • android
  • ios