ಸರ್ಕಾರಿ ಶಾಲೆ ದತ್ತು ಪಡೆದ ನಟ ಪ್ರಕಾಶ್ ರಾಜ್ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಭಾರತೀನಗರಶಾಲೆಯ ಸರ್ವತೋಮುಖ ಅಭಿವೃದ್ದಿಗೆ ಸಿದ್ದ ಎಂದ ನಟ 

ಮಂಡ್ಯ[ಜೂ.12]: ನಟ ಪ್ರಕಾಶ್ ರಾಜ್ ಇಂದು ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಭಾರತೀನಗರ ಸಮೀಪದ ಮೆಣಸಗೆರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ದತ್ತು ಸ್ವೀಕರಿಸಿದ್ದಾರೆ. 

ನಂತರ ಮಾತನಾಡಿದ ಪ್ರಕಾಶ್ ರಾಜ್, ಭಯ ಉಪಯೋಗಿಸಿ ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸಲಾಗುತ್ತಿದೆ. ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳೂ ಇದರಲ್ಲಿ ಭಾಗಿಯಾಗಿವೆ ಎಂದು ಹರಿಹಾಯ್ದರು. ಶೇ.70ರಷ್ಟು ಗ್ರಾಮೀಣ ಪ್ರದೇಶಗಳಿರುವ ನಮ್ಮ ದೇಶದಲ್ಲಿ ಅಂಜಿಕೆಯಿಲ್ಲದೆ ಓದಬೇಕೆಂದರೆ ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಬೇಕು ಎಂದು ಅಭಿಪ್ರಾಯಪಟ್ಟರು.

Scroll to load tweet…

ಶಾಲೆಗೆ ಶಿಕ್ಷಣ ಇಲಾಖೆ ನೀಡುವ ಶಿಕ್ಷಕರಿಗಿಂತಲೂ ಹೆಚ್ಚಿನ ಶಿಕ್ಷಕರ ಅಗತ್ಯವಿದ್ದಲ್ಲಿ ಅಂತಹ ಸಂದರ್ಭದಲ್ಲಿ ಶಿಕ್ಷಕರನ್ನು ನೇಮಿಸಲು ತಾವು ಸಹಾಯ ಮಾಡುವುದಾಗಿ ಪ್ರಕಾಶ್ ಭರವಸೆ ನೀಡಿದರು. ಎಲ್ಲರೊಂದಿಗೆ ಚರ್ಚೆ ನಡೆಸಿ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲು ತಮ್ಮ ತಂಡ ಸಿದ್ಧವಿರುವುದಾಗಿ ಅವರು ಸ್ಪಷ್ಟಪಡಿಸಿದರು.