'ಪ್ರಕಾಶ್ ರೈ ಫೌಂಡೇಷನ್' ಮೂಲಕ ವಿವಿಧ ರೀತಿಯ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ.

ಹೈದರಾಬಾದ್(ಜೂ.27): ಬಹುಭಾಷಾ ನಟ ಪ್ರಕಾಶ್ ರೈ ಅವರು ರಂಜಾನ್ ಹಬ್ಬವನ್ನು ಅರ್ಥ ಪೂರ್ಣವಾಗಿ ಆಚರಿಸಿದ್ದಾರೆ.

ತೆಲಂಗಾಣದ ಕೊಂಡಾರೆಡ್ಡಿ ಗ್ರಾಮವನ್ನು ದತ್ತು ಪಡೆದಿರುವ ರೈ ವಿವಿಧ ರೀತಿಯಲ್ಲಿ ಆ ಗ್ರಾಮದ ಅಭಿವೃದ್ಧಿಗೆ ಶ್ರಮವಹಿಸುತ್ತಿದ್ದಾರೆ. ರಂಜಾನ್ ಹಬ್ಬವನ್ನು ಇದೇ ಗ್ರಾಮದಲ್ಲಿ ಆಚರಿಸಿರುವ ರೈ ಬಡ ಕುಟುಂಬವೊಂದಕ್ಕೆ ಮನೆ ನಿರ್ಮಿಸಿ ಕೊಡುವ ಮೂಲಕ ರಂಜಾನ್ ಗಿಫ್ಟ್ ನೀಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು' ಮನೆಯನ್ನು ನಿರ್ಮಿಸಿಕೊಡುವುದರ ಮೂಲಕ ಆ ಕುಟುಂಬಕ್ಕೆ ಮರಳಿ ಸಂತೋಷ ನೀಡಿದ್ದೇನೆ' ಎಂದು ತಿಳಿಸಿದ್ದಾರೆ.ರೈ ಅವರು 'ಪ್ರಕಾಶ್ ರೈ ಫೌಂಡೇಷನ್' ಮೂಲಕ ವಿವಿಧ ರೀತಿಯ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ.