, ‘ಧರ್ಮ, ನೈತಿಕತೆ ಹಾಗೂ ಸಂಸ್ಕೃತಿಯ ಹೆಸರಿನಲ್ಲಿ ಸೃಷ್ಟಿಸುವ ಭಯವು ಭಯೋತ್ಪಾದನೆಯಲ್ಲದೇ ಇನ್ನೇನು? ಸುಮ್ಮನೇ ಕೇಳುತ್ತಿದ್ದೇನಷ್ಟೇ’ ಎಂದು ಪ್ರಶ್ನಿಸಿದ್ದಾರೆ
ಚೆನ್ನೈ(ನ.04): ಹಿಂದೂಗಳಲ್ಲೂ ಭಯೋತ್ಪಾದಕರಿದ್ದಾರೆ ಎಂದು ನಟ ಕಮಲ್ ಹಾಸನ್ ನೀಡಿದ ಹೇಳಿಕೆ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಬಹುಭಾಷಾ ನಟ ಪ್ರಕಾಶ್ ರೈ (ರಾಜ್) ಅವರು ಕಮಲ್ ಹೇಳಿಕೆಗೆ ಸಹಮತ ವ್ಯಕ್ತಪಡಿಸಿ ದ್ದಾರೆ. ಅಲ್ಲದೆ, ‘ಧರ್ಮ, ನೈತಿಕತೆ ಹಾಗೂ ಸಂಸ್ಕೃತಿಯ ಹೆಸರಿನಲ್ಲಿ ಸೃಷ್ಟಿಸುವ ಭಯವು ಭಯೋತ್ಪಾದನೆಯಲ್ಲದೇ ಇನ್ನೇನು? ಸುಮ್ಮನೇ ಕೇಳುತ್ತಿದ್ದೇನಷ್ಟೇ’ ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಟ್ವೀಟರ್ ಹಾಗೂ ಫೇಸ್‌ಬುಕ್‌ನಲ್ಲಿ ಬರೆದು ಕೊಂಡಿರುವ ಪ್ರಕಾಶ್ ರೈ, ಸರಣಿ ಹೇಳಿಕೆಗಳಲ್ಲಿ ಕೆಲವು ಹಿಂದು ಸಂಘಟನೆಗಳು ನಡೆಸುವ ಕೃತ್ಯಗಳ ಬಗ್ಗೆ ಪರೋಕ್ಷವಾಗಿ ಕಿಡಿಕಾರಿದ್ದಾರೆ. ಕಮಲ್ ವಿರುದ್ಧ ದಾವೆ: ಹಿಂದೂ ಭಯೋತ್ಪಾದನೆ ಕುರಿತ ಕಮಲ್ ಹಾಸನ್ ಹೇಳಿಕೆ ಖಂಡಿಸಿ ವಾರಾಣಸಿಯಲ್ಲಿ ಅವರ ವಿರುದ್ಧ ಮಾನಹಾನಿ ದಾವೆ ಹೂಡಲಾಗಿದೆ.

ರೈ ಟ್ವೀಟ್'ಗಳು
ನೈತಿಕತೆ ಹಾಗೂ ಸಂಸ್ಕೃತಿಯ ಹೆಸರಿನಲ್ಲಿ ಸೃಷ್ಟಿಸುವ ಹೆದರಿಕೆಯು ಭಯೋತ್ಪಾದನೆಯಲ್ಲದೇ ಇನ್ನೇನು? ನೈತಿಕತೆ ಹೆಸರಿನಲ್ಲಿ ನನ್ನ ದೇಶದ ಬೀದಿಗಳಲ್ಲಿ ಯುವ ಜೋಡಿಗಳನ್ನು ಬೈಯು ವುದು ಹಾಗೂ ಅವರ ಮೇಲೆ ಹಲ್ಲೆ ನಡೆಸುವುದು ಭಯೋತ್ಪಾದನೆ ಅಲ್ಲವೇ?
ಗೋಹತ್ಯೆ ನಡೆಸಲಾಗುತ್ತಿದೆ ಎಂಬ ಸಣ್ಣ ಶಂಕೆಯ ಮೇರೆಗೆ ಗೋವುಗಳನ್ನು ಸಾಗಿಸುತ್ತಿರುವವರನ್ನು ಬಡಿದು ಕೊಲ್ಲುವುದು, ಕಾನೂನು ಕೈಗೆತ್ತಿಕೊಳ್ಳುವುದು ಭಯೋತ್ಪಾದನೆ ಅಲ್ಲದೇ ಇನ್ನೇನು?
ನೀತಿ-ನಿರ್ಧಾರಗಳ ವಿರುದ್ಧ ಸಣ್ಣದಾಗಿ ದನಿ ಎತ್ತಿದರೂ ಆ ದನಿಯನ್ನು ಅಡಗಿಸಲು ಬೆದರಿಸುವುದು, ಬೈಯುವುದು, ಪೀಡಿಸುವುದು ಭಯೋತ್ಪಾದನೆ ಅಲ್ಲವೇ?
ಹಾಗಿದ್ದರೆ ಯಾವುದು ಭಯೋತ್ಪಾದನೆ, ಸುಮ್ಮನೇ ಕೇಳುತ್ತಿದ್ದೇನಷ್ಟೇ..
