ನಲಪಾಡ್ ಪ್ರಕರಣದಲ್ಲಿ ನಿಜಕ್ಕೂ ಮುಜುಗರವಾಗಿದೆ. ಎಲ್ಲಾ ಪಂಥದವರು ಒಂದೇ ಕಡೇ ಸೇರಿದ್ದು ಒಳ್ಳೆಯದು ಎಂದು ಕೂಡ ತಾವು ಹೇಳಿದ್ದು, ಆತ ಒಳ್ಳೆಯ ಹುಡುಗ ಎಂದಿದ್ದೆ ಎಂದು ಹಿರಿಯ ನಟ ಪ್ರಕಾಶ್ ರೈ ನಲಪಾಡ್ ಬಗ್ಗೆ ಈಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು : ನಲಪಾಡ್ ಪ್ರಕರಣದಲ್ಲಿ ನಿಜಕ್ಕೂ ಮುಜುಗರವಾಗಿದೆ. ಎಲ್ಲಾ ಪಂಥದವರು ಒಂದೇ ಕಡೇ ಸೇರಿದ್ದು ಒಳ್ಳೆಯದು ಎಂದು ಕೂಡ ತಾವು ಹೇಳಿದ್ದು, ಆತ ಒಳ್ಳೆಯ ಹುಡುಗ ಎಂದಿದ್ದೆ ಎಂದು ಹಿರಿಯ ನಟ ಪ್ರಕಾಶ್ ರೈ ನಲಪಾಡ್ ಬಗ್ಗೆ ಈಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಆತ ಅಂದು ವೇದಿಕೆಯಲ್ಲಿ ಒಂದೊಳ್ಳೆಯ ಕೆಲಸ ಮಾಡಿದ್ದ, ಆದರೆ ಆತ ಅಷ್ಟು ಕ್ರೂರಿ ಎಂದು ಗೊತ್ತಿರಲಿಲ್ಲ. ಇನ್ನುಮುಂದೆ ಆಲೋಚನೆ ಮಾಡಿ ಮಾತನಾಡಬೇಕಾದ ಪರಿಸ್ಥಿತಿ ಇದೆ. ನಲಪಾಡ್ ಹ್ಯಾರಿಸ್’ನಿಂದ ವಿದ್ವತ್ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ತಾವು ಖಂಡಿಸುವುದಾಗಿ ರೈ ಹೇಳಿದ್ದಾರೆ.
