ಪ್ರಕಾಶ್ ರೈ ಪ್ರಕಾರ ದೇಶಕ್ಕೆ ದೊಡ್ಡ ರೋಗ ಯಾರು..?

Prakash Rai Slams BJP
Highlights

ನಮ್ಮ ದೇಹಕ್ಕೆ ದೊಡ್ಡ ರೋಗ ಬಂದಾಗ ಅದರ ಬಗ್ಗೆ ಯೋಚನೆ ಮಾಡುತ್ತೇವೆ. ಕೆಮ್ಮು ನೆಗಡಿ ಬಗ್ಗೆ ಆಮೇಲೆ ಯೋಚಿಸುತ್ತೇವೆ ಎಂದು ಬಿಜೆಪಿ ವಿರುದ್ಧ ಹಿರಿಯ ನಟ ಪ್ರಕಾಶ್ ರೈ ವಾಗ್ದಾಳಿ ನಡೆಸಿದ್ದಾರೆ.

ಮೈಸೂರು: ನಮ್ಮ ದೇಹಕ್ಕೆ ದೊಡ್ಡ ರೋಗ ಬಂದಾಗ ಅದರ ಬಗ್ಗೆ ಯೋಚನೆ ಮಾಡುತ್ತೇವೆ. ಕೆಮ್ಮು ನೆಗಡಿ ಬಗ್ಗೆ ಆಮೇಲೆ ಯೋಚಿಸುತ್ತೇವೆ ಎಂದು ಬಿಜೆಪಿ ವಿರುದ್ಧ ಹಿರಿಯ ನಟ ಪ್ರಕಾಶ್ ರೈ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ದೇಶಕ್ಕೆ ದೊಡ್ಡ ರೋಗವಾದರೆ ಕಾಂಗ್ರೆಸ್ ಕೆಮ್ಮು ನೆಗಡಿ ಇದ್ದಂತೆ. ದೇಶದಲ್ಲಿ ಕೋಮುವಾದ ಹೆಚ್ಚಾಗಲು ನಾನು ಎಂಎಲ್’ ಆಗಬೇಕಿಲ್ಲ. ಎಲ್ಲಾ ರೀತಿಯಾದ ಕೋಮುವಾದವೂ ಕೂಡ ತಪ್ಪೇ, ಹಿಂದೂ ಮುಸ್ಲಿಂ ಕೋಮುವಾದ ಎಂದು ಮಾತನಾಡಬೇಡಿ. ಕೆಲವು ಮುಸ್ಲಿಂ ಕೋಮುವಾದಿಗಳು ಕೆಲವು ಹಿಂದೂ ಕೋಮುವಾದಿಗಳು ಎಲ್ಲರೂ ಇದ್ದಾರೆ. ಮೋದಿ ಮೋಸ್ಟ್ ಡೇಂಜರಸ್ ವ್ಯಕ್ತಿ ಎಂದಿದ್ದಾರೆ.

ಇನ್ನು ದೇಶದಲ್ಲಿ ಮನುಷ್ಯರ ಹತ್ಯೆಯಾಗಿದೆ. ಅದರಲ್ಲಿ ಮುಸ್ಲಿಂ , ಹಿಂದೂ ಎನ್ನುವ ಬೇಧವಿಲ್ಲ. ಎಲ್ಲಾ ಹತ್ಯೆಯನ್ನೂ ನಾನು ಖಂಡಿಸುತ್ತೇನೆ ಎಂದಿದ್ದಾರೆ.

ಇನ್ನು ಇದೇ ವೇಳೆ ಅನಂತ್ ಕುಮಾರ್ ಹೆಗ್ಡೆ ವಿರುದ್ಧವೂ ವಾಗ್ದಾಳಿ ನಡೆಸಿ ಆತ ಒಬ್ಬ ರಾಕ್ಷಸ ಅಂತಹ ರಾಕ್ಷಸರನ್ನು ಸುಮ್ಮನೇ ಬಿಡಬಾರದು. ಪ್ರತಾಪ್ ಸಿಂಹ, ಅನಂತ್ ಕುಮಾರ್ ಹೆಗ್ಡೆ ಹೇಳಿಕೆಗಳನ್ನು ಅವರ ಪಕ್ಷವೇ ಖಂಡಿಸುತ್ತಿಲ್ಲ. ಅವರು ಸೊಂಟದ ಕೆಳಗಿನ ವಿಚಾರ ಮಾತನಾಡುತ್ತಾರೆ. ನನ್ನ ಮಗನ ಸಾವಿನ ಬಗ್ಗೆ ಪ್ರತಾಪ್ ಸಿಂಹ ಸೊಂಟದ ಕೆಳಗಿನ ಭಾಷೆ ಬಳಸಿದ್ದ. ಬಿಜೆಪಿ ಮತ ಹಾಕಬೇಡಿ ಎಂದು ನಾನೆಲ್ಲೂ ಹೇಳುವುದಿಲ್ಲ, ಆದರೆ ಬಿಜೆಪಿ ವಿರುದ್ಧ ಎಚ್ಚೆತ್ತುಕೊಳ್ಳಿ. ಭ್ರಷ್ಟಾಚಾರಕ್ಕಿಂತಲೂ ಕೋಮು ಸೌಹಾರ್ಧತೆ ಮುಖ್ಯ ಎಂದಿದ್ದಾರೆ.

ಇನ್ನು ಇತ್ತೀಚಿನ ಬೆಳವಣಿಗೆಗಳಿಂದ ಪ್ರಕಾಶ್ ರೈ ಮಾರ್ಕೆಟ್ ಬಿದ್ದು ಹೋಯ್ತಾ ಎನ್ನುವ ಪ್ರಶ್ನೆ ಬಗ್ಗೆ ಉತ್ತರ ನೀಡಿದ ಪ್ರಕಾಶ್ ರೈ ನನ್ನ ಮಾರ್ಕೆಟ್ ಬಿದ್ದಿಲ್ಲ. ಈಗಲೂ 20 ಸಿನಿಮಾಗಳಿಗೆ ಡೇಟ್ ಕೇಳಿದ್ದಾರೆ. ಸಾಕಷ್ಟು ಸಿನಿಮಾಗಳ ಚಿತ್ರೀಕರಣ ನಡೆಯುತ್ತಿದೆ ಎಂದಿದ್ದಾರೆ.

loader