ಗೋಮೂತ್ರದ ಬಗ್ಗೆ ಮತ್ತೆ ವಿವಾದಿತ ಹೇಳಿಕೆ ನೀಡಿದ ರೈ

First Published 12, Apr 2018, 1:52 PM IST
Prakash Rai Slams Ananth Kumara Hegde
Highlights

ಗೋ ಮೂತ್ರದ ಕುರಿತು ಮತ್ತೆ ನಟ ಪ್ರಕಾಶ್ ರೈ ವಿವಾದಿತವಾದ ಹೇಳಿಕೆ ನೀಡಿದ್ದಾರೆ.

ವಿಜಯಪುರ: ಗೋ ಮೂತ್ರದ ಕುರಿತು ಮತ್ತೆ ನಟ ಪ್ರಕಾಶ್ ರೈ ವಿವಾದಿತವಾದ ಹೇಳಿಕೆ ನೀಡಿದ್ದಾರೆ.

ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ವಿರುದ್ಧ ಆಕ್ರೋಶ ಹೊರಹಾಕಿದ ಅವರು, ಗೋಮೂತ್ರದಿಂದ ಎಲ್ಲವು ಪವಿತ್ರವಾಗುವುದಾದರೆ ಅನಂತ ಕುಮಾರ್ ಹಗಲು ಒಂದು ಗ್ಲಾಸ್, ರಾತ್ರಿ ಒಂದು ಗ್ಲಾಸ್ ಗೋ ಮೂತ್ರ ಕುಡಿಯಲಿ ಎಂದು ಹೇಳಿದ್ದಾರೆ.

ತಮ್ಮ ಬಟ್ಟೆಗಳನ್ನೂ ಕೂಡ ಗೋ ಮೂತ್ರದಲ್ಲಿ ತೊಳೆಯಲಿ ಎಂದು ಹೇಳುವ ಮೂಲಕ ಮತ್ತೆ ವಿವಾದ ಸೃಷ್ಠಿಸಿದ್ದಾರೆ. ನಾನು ಹಿಂದೂ ವಿರೋಧಿ ಅಲ್ಲ, ನಾನು ಅನಂತಕುಮಾರ್ ಹೆಗಡೆ, ಅಮಿತ್ ಶಾ ವಿರೋಧಿಯಷ್ಟೇ ಎಂದಿದ್ದಾರೆ.

ಇದೇ ವೇಳೆ ಅನಂತ ಕುಮಾರ್ ಅವರಿಗೆ ನನ್ನ ಅಪ್ಪ-ಅಮ್ಮನ ಕುರಿತು ಹೇಗೆ ಮಾತಾನಾಡಿದಿರಿ ನೀವು ಎಂದು ಪ್ರಶ್ನೆ ಮಾಡಿದ್ದು, ಧೈರ್ಯ ಇದ್ದರೆ ಅನಂತ ಕುಮಾರ್ ಹೆಗಡೆ ಎದುರು ಬರಲಿ ಎಂದು ಬಹಿರಂಗ ಸವಾಲು ಹಾಕಿದ್ದಾರೆ.  

loader