ಅನಂತ್ ಕುಮಾರ್ ಹೆಗಡೆ ವಿರುದ್ಧ ಹೊಸ ಚಳುವಳಿಗೆ ಕರೆ ನೀಡಿದ ಪ್ರಕಾಶ್ ರೈ

First Published 16, Feb 2018, 5:31 PM IST
Prakash Rai Slams Ananth Kumar Hegde
Highlights

ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರು ಹೋದಲ್ಲೆಲ್ಲಾ ಅಂಬಾ ಅಂಬಾ ಎನ್ನುವ ಮೂಲಕ ಯುವಕರು ಅವರ ವಿರುದ್ಧ ಅಂಬಾ ಚಳುವಳಿ ನಡೆಸಬೇಕು ಎಂದು ನಟ ಪ್ರಕಾಶ್ ರೈ ಹೇಳಿದ್ದಾರೆ.

ಧಾರವಾಡ : ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರು ಹೋದಲ್ಲೆಲ್ಲಾ ಅಂಬಾ ಅಂಬಾ ಎನ್ನುವ ಮೂಲಕ ಯುವಕರು ಅವರ ವಿರುದ್ಧ ಅಂಬಾ ಚಳುವಳಿ ನಡೆಸಬೇಕು ಎಂದು ನಟ ಪ್ರಕಾಶ್ ರೈ ಹೇಳಿದ್ದಾರೆ.

ಅಂಬಾ ಅಂಬಾ ಎನ್ನುತ್ತಲೇ ಮಧ್ಯ ಮಧ್ಯೆ ಹುಂಬಾ ಹುಂಬಾ ಎನ್ನುವ ಮೂಲಕ ಅವರನ್ನು ನಗೆಪಾಟಲಿಗೆ ಸಿಗಿಸಬೇಕು ಎಂದು ರೈ ಅನಂತ್ ಕುಮಾರ್ ಹೆಗಡೆ ವಿರುದ್ಧದ ಚಳುವಳಿಗೆ ಪ್ರೇರಣೆ ನೀಡಿದರು.

ಇಲ್ಲಿನ ವಿದ್ಯಾವರ್ಧಕ ಸಂಘದಲ್ಲಿ ಎಐಡಿವೈಒ ಹಾಗೂ ಎಐಡಿಎಸ್ಒ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಜನೋತ್ಸವದಲ್ಲಿ ಪ್ರಸಕ್ತ ಸಾಮಾಜಿಕ ಸಾಂಸ್ಕೃತಿಕ ತಲ್ಲಣಗಳು ಸಂವಾದದಲ್ಲಿ ಅವರು ಮಾತನಾಡಿದರು.

ನಮ್ಮ ಅಪ್ಪ ಅಮ್ಮಂದಿರ ಬಗ್ಗೆ, ನಮ್ಮ ರಕ್ತ ಹಿಯಾಳಿಸಿದ ಮಾತನಾಡಿದ ಅವರು ಅನಂತ್ ಕುಮಾರ್ ಹೆಗಡೆ ವಿರುದ್ಧ  ಚಳುವಳಿ ಮಾಡಬೇಕಿದೆ.

ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಕೆಲ ಬಲಪಂಥೀಯರು ಮಾಡುತ್ತಿರುವ ಕೆಲಸಗಳಿಂದಾಗಿ ನಾವು ಸಿಟ್ಟಾಗಿದ್ದೇವೆ. ಆದರೆ ಅವರು ಸೇಡು ಇಟ್ಟುಕೊಂಡಿದ್ದಾರೆ ಎಂದು ಹೇಳಿದರು.

loader