ಗೋಮೂತ್ರದಿಂದ ವೇದಿಕೆ ಶುದ್ಧಗೊಳಿಸಿದ ಬಿಜೆಪಿ ಕಾರ್ಯಕರ್ತರಿಗೆ ಪ್ರಕಾಶ್ ರೈ ತಿರುಗೇಟು

First Published 16, Jan 2018, 5:28 PM IST
Prakash Rai Reacts to BJP Workers Act Of Cleansing
Highlights

ತಾನು ಭಾಗವಹಿಸಿದ್ದ ಕಾರ್ಯಕ್ರಮದ ವೇದಿಕೆಯನ್ನು ಬಿಜೆಪಿ ಕಾರ್ಯಕರ್ತರು ಗೋಮೂತ್ರದಿಂದ ಸ್ವಚ್ಛಮಾಡಿರುವ ಘಟನೆಗೆ ನಟ ಪ್ರಕಾಶ್ ರೈ ತಿರುಗೇಟು ನೀಡಿದ್ದಾರೆ.

ಬೆಂಗಳೂರು: ತಾನು ಭಾಗವಹಿಸಿದ್ದ ಕಾರ್ಯಕ್ರಮದ ವೇದಿಕೆಯನ್ನು ಬಿಜೆಪಿ ಕಾರ್ಯಕರ್ತರು ಗೋಮೂತ್ರದಿಂದ ಸ್ವಚ್ಛಮಾಡಿರುವ ಘಟನೆಗೆ ನಟ ಪ್ರಕಾಶ್ ರೈ ತಿರುಗೇಟು ನೀಡಿದ್ದಾರೆ.

#JustAsking ಎಂಬ ಹ್ಯಾಶ್’ಟ್ಯಾಗ್ ಬಳಸಿ, ನಾನು ಎಲ್ಲೇ ಹೋದ್ರೂ ಈ ರೀತಿ ಶುದ್ಧ ಮಾಡ್ತಿರಾ ಎಂದು ಪ್ರಕಾಶ್ ರೈ ಟ್ವೀಟಿಸಿ ಬಿಜೆಪಿ ಕಾರ್ಯಕರ್ತರ ಕಾಲೆಳೆದಿದ್ದಾರೆ.

ಕಳೆದ ಜ. 13ರಂದು ಶಿರಸಿಯ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ನಟ ಪ್ರಕಾಶ್ ರೈ ಭಾಗವಹಿಸಿದ್ದರು.

ಪ್ರಕಾಶ್ ರೈ ಭಾಗವಹಿಸುವಿಕೆಯಿಂದ ಆ ಸ್ಥಳ ಅಪವಿತ್ರಗೊಂಡಿದೆಯೆಂದು ಹೇಳಿ, ಗೋಮೂತ್ರ ಸಿಂಪಡಿಸಿ ಆ ವೇದಿಕೆಯನ್ನು ಗೋಮೂತ್ರದಿಂದ ಶುದ್ಧಗೊಳಿಸಿದ್ದಾರೆ.

ಪ್ರಕಾಶ್ ರೈ ಸಮಾಜ ಸುಧಾರಕರಲ್ಲ, ಸಮಾಜ ಸುಧಾರಣೆಗೆ ಯಾವುದೇ ಕೊಡುಗೆಯಿಲ್ಲ. ಹಿಂದೂ ಧರ್ಮಕ್ಕೆ ಅವರ ಅವಶ್ಯಕತೆಯಿಲ್ಲ, ಎಂದು ಬಿಜೆಪಿ ಮುಖಂಡರು ಈ ಸಂದರ್ಭದಲ್ಲಿ ಹೇಳಿದ್ದಾರೆ.

loader