ಚಿಕ್ಕಬಳ್ಳಾಪುರ/ಗೌರಿಬಿದನೂರು: ತನಿಖೆ ಪೂರ್ಣಗೊಳ್ಳುವ ತನಕ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಕುರಿತು ಮಾತನಾಡು ವುದಿಲ್ಲ. ತನಿಖೆ ಮುಗಿಯಲಿ ಆ ಮೇಲೆ ಮಾತನಾಡುವೆ ಎಂದು ನಟ ಪ್ರಕಾಶ್ ರೈ ಹೇಳಿದ್ದಾರೆ.

ಇಷ್ಟು ದಿನ ಗೌರಿ ಹಂತಕರನ್ನು ವಿಶೇಷ ತನಿಖಾ ದಳ (ಎಸ್ ಐಟಿ) ಹಿಡಿದಿಲ್ಲ ಎಂಬ ಆರೋಪಗಳಿದ್ದವು. ಇದೀಗ ಆರೋಪಿಗಳ ಬಂಧನವಾಗಿದ್ದು, ತನಿಖೆ ಅಂತಿಮ ಹಂತಕ್ಕೆ ಬಂದಿದೆ. 

ಇಂತಹ ಸಂದರ್ಭದಲ್ಲಿ ಯಾರ ಮೇಲೂ ಅಪವಾದ ಹೊರಿಸುವುದು ಸರಿಯಲ್ಲ ಎಂದು ಅವರು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಹೇಳಿದರು.