ಸದ್ಯದಲ್ಲಿಯೇ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಆ ಜನರು ನಿಮಗೇಕೆ ಮತ ನೀಡಬೇಕು? ರಾಜಕೀಯ ನಾಯಕರಿಗೆ ಪ್ರಕಾಶ್ ರೈ 10 ಪ್ರಶ್ನೆಗಳು

news | Friday, February 16th, 2018
Suvarna Web Desk
Highlights

ಕರ್ನಾಟಕದಲ್ಲಿ ಇರುವುದು ನಿಮಗೆ ತಿಳಿದಿದೆ. ಸದ್ಯದಲ್ಲಿಯೇ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಆ ಜನರು ನಿಮಗೇಕೆ ಮತ ನೀಡಬೇಕು?

ವಿವಿಧ ಪಕ್ಷಗಳ ರಾಜಕೀಯ ನಾಯಕರೇ! ಕೃಷಿಕರು, ಕೈಮಗ್ಗ ನೇಕಾರರು, ಕುಶಲಕರ್ಮಿಗಳು, ಪಿಂಜಾರರು, ನಾಪಿತರು, ಬುಡಕಟ್ಟು ಜನರು, ನಟರು, ನಟುವಾಂಗರು, ದೊಂಬಿದಾಸರು ಮುಂತಾದ ಕೈಉತ್ಪಾದಕ ಜನವರ್ಗಗಳು ಕರ್ನಾಟಕದಲ್ಲಿ ಇರುವುದು ನಿಮಗೆ ತಿಳಿದಿದೆ. ಸದ್ಯದಲ್ಲಿಯೇ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಆ ಜನರು ನಿಮಗೇಕೆ ಮತ ನೀಡಬೇಕು?

1) ದೇಶದ ಉತ್ಪಾದಕತೆಯಲ್ಲಿ ಶೇಕಡ ಅರವತ್ತು ಉತ್ಪಾದನೆ ನಿಭಾಯಿಸುತ್ತಿರುವ ಕೈ ಉತ್ಪಾದಕ ಜನವರ್ಗಗಳು ಏಕೆ ದರಿದ್ರರಾಗಿ ಉಳಿದಿದ್ದಾರೆ?

2) ಕೈ ಉತ್ಪನ್ನಗಳಿಗೆ ಬೆಲೆ ಸಿಕ್ಕುವಂತೆ ಮಾಡುವಲ್ಲಿ ನೀವೇಕೆ ಸೋತಿದ್ದೀರಿ?

3) ಯಂತ್ರೋದ್ಯಮವನ್ನೇಕೆ ತಲೆಯ ಮೇಲೆ ಹೊತ್ತು ತಿರುಗುತ್ತಿದ್ದೀರಿ?

4) ಸಾರ್ವಜನಿಕ ವಿತರಣೆಗಾಗಿ ಅಕ್ಕಿಯನ್ನು ಮಾತ್ರವೇ ಏಕೆ ಕೊಳ್ಳುತ್ತಿದ್ದೀರಿ? ಜೋಳ, ರಾಗಿ, ಮುಂತಾದ ಸಿರಿಧಾನ್ಯಗಳು, ಎಣ್ಣೆಕಾಳು, ಇತ್ಯಾದಿ ಆಹಾರ ಪದಾರ್ಥಗಳನ್ನು, ಕೊಳ್ಳುವ ಹಾಗು ವಿತರಿಸುವ ಮೂಲಕ ಮಳೆ ಆಧಾರಿತ ಕೃಷಿಕರನ್ನೇಕೆ ಉತ್ತೇಜಿಸುತ್ತಿಲ್ಲ ನೀವು? ನೀರಾವರಿ ಕೃಷಿ, ಕೊಳವೆಭಾವಿ ಕೃಷಿ, ಪಂಪ್‌ಸೆಟ್ ಕೃಷಿ, ಪಾಲಿಹೌಸ್ ಕೃಷಿ ಇತ್ಯಾದಿ ತಂತ್ರಜ್ಞಾನ ಆಧರಿಸಿದ ಕೃಷಿ ಪದ್ಧತಿ ಮಾತ್ರವೇ ಕೃಷಿಯೇ?

5) ಕೈ ಉತ್ಪಾದಕರಿಗೆ ಕಚ್ಚಾ ವಸ್ತುಗಳನ್ನು ರಿಯಾಯಿತಿ ದರದಲ್ಲೇಕೆ ವಿತರಣೆ ಮಾಡುತ್ತಿಲ್ಲ?

6) ಕೈ-ಉತ್ಪಾದಕರ ಮಾರಾಟ ಸಹಾಕಾರ ಸಂಘಗಳ ಸ್ಥಾಪನೆಗೆ ಏಕೆ ಪ್ರೊತ್ಸಾಹ ನೀಡುತ್ತಿಲ್ಲ ನೀವು?

7) ಖಾಸಗಿ ಸೂಪರ್ ಮಾರುಕಟ್ಟೆಗಳ ಬದಲಿಗೆ ಜನಪರ ಸಂತೆಗಳನ್ನೇಕೆ ಸ್ಥಾಪಿಸುತ್ತಿಲ್ಲ? ನಗರ ಪ್ರದೇಶಗಳಿಗಳಿಗೇಕೆ ವಿಸ್ತರಿಸುತ್ತಿಲ್ಲ?

8) ಗೋಮಾಳ, ಅರಣ್ಯ ಭೂಮಿ, ಸರ್ಕಾರಿ ಭೂಮಿ ಇತ್ಯಾದಿ ಸಾಮುದಾಯಿಕ ಜಮೀನುಗಳನ್ನೇಕೆ ಖಾಸಗಿಕರಣಗೊಳಿಸುತ್ತಿದ್ದೀರಿ?

9) ಪಾರಂಪರಿಕ ತಂತ್ರಜ್ಞಾನಗಳ ಬಗ್ಗೆ ನೀವು ಏಕೆ ಅಸಡ್ಡೆಯನ್ನು ತೋರುತ್ತಿದ್ದೀರಿ?

10) ಕೈಉತ್ಪಾದಕ ಬಡವರನ್ನು, ಜಾತಿ ಜಾತಿಗಳ ನಡುವೆ, ಧರ್ಮ ಧರ್ಮಗಳ ನಡುವೆ ಏಕೆ ಒಡೆದು ಆಡುವುದನ್ನು ಮಾಡುತ್ತಿದ್ದೀರಿ?

Comments 0
Add Comment

    Pratap Simha Hits Back At Prakash Rai

    video | Thursday, April 12th, 2018
    Suvarna Web Desk