ನವದೆಹಲಿ [ಜು.04]:  ರಾಜ್ಯ ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆಗೆ ಎಚ್.ಕೆ ಕುಮಾರಸ್ವಾಮಿ ನೇಮಿಸಲಾಗಿದೆ. ಈ ಆಯ್ಕೆ ನನಗೆ ಸಂತೋಷವಾಗಿದೆ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದಾರೆ. 

"

ನವದೆಹಲಿಯಲ್ಲಿ ಮಾತನಾಡಿದ ಹಾಸನ ಸಂಸದ ಪ್ರಜ್ವಲ್ ರೇವಣ್ಣ, ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ತೊರೆದಿರುವ ಎಚ್. ವಿಶ್ವನಾಥ್ ಅವರಿಗೆ ಸರಿಸಮಾನವಾದ ಹುದ್ದೆ ದೊರೆತಲ್ಲಿ ಇನ್ನಷ್ಟು  ಖುಷಿಯಾಗುತ್ತದೆ ಎಂದರು.

ಇನ್ನು ಇದೇ ವೇಳೆ ಜೆಡಿಎಸ್ ನಲ್ಲಿ ಹಲವು ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ನಿಖಿಲ್ ಕುಮಾರಸ್ವಾಮಿ ಅವರಿಗೆ ಜಾತ್ಯಾತೀತ ಜನತಾದಳದ ಯುವ ಘಟಕದ ಅಧ್ಯಕ್ಷ ಸ್ಥಾನ ನೀಡಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಪಕ್ಷದಿಂದ ತಮಗೆ ಸಿಕ್ಕಿರುವ ಮಾಹಿತಿಯಲ್ಲಿ ಅಧ್ಯಕ್ಷ, ಕಾರ್ಯಾಧ್ಯಕ್ಷ ಸ್ಥಾನಗಳ ಬಗ್ಗೆ ಮಾತ್ರವೇ ಮಾಹಿತಿ ನೀಡಲಾಗಿದೆ ಎಂದರು. 

ನಿಖಿಲ್ ಕುಮಾರಸ್ವಾಮಿಗೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಸ್ಥಾನ ನೀಡಿದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಪಕ್ಷದಿಂದ ಅಧಿಕೃತ ಮಾಹಿತಿ ಸಿಗದೆ  ನಿಖಿಲ್ ನೇಮಕದ ಬಗ್ಗೆ ಪ್ರತಿಕ್ರಿಯಿಸುವುದು ನನ್ನ ಸ್ಥಾನಕ್ಕೆ ಸೂಕ್ತವಾಗಲಾರದು. ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ ಎಂದು  ಸಂಸದ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.