ಅಧಿಕೃತ ಆದೇಶ ಪತ್ರ ನೀಡಿ ಜೆಡಿಎಸ್ ವರಿಷ್ಠರು ಆಶೀರ್ವಾದಿಸಿದ್ದಾರೆ.
ಬೆಂಗಳೂರು(ನ.27): ಯುವ ನಾಯಕ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್'ನ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ಮಾಜಿ ಪ್ರಧಾನಿ ದೇವೇಗೌಡ ಅವರು ನೇಮಕಮಾಡಿ ಆದೇಶ ಹೊರಡಿಸಿದ್ದಾರೆ. ಯುವ ನಾಯಕ ಎಂದು ಜೆಡಿಎಸ್ ನಲ್ಲಿ ಹೆಸರುವಾಸಿಯಾಗಿದ್ದ ಪ್ರಜ್ವಲ್ ಅವರಿಗೆ ಇಲ್ಲಿಯವರೆಗೂ ಯಾವುದೇ ಸ್ಥಾನಮಾನ ನೀಡಿರಲಿಲ್ಲ. ಅಧಿಕೃತ ಆದೇಶ ಪತ್ರ ನೀಡಿ ಜೆಡಿಎಸ್ ವರಿಷ್ಠರು ಆಶೀರ್ವಾದಿಸಿದ್ದಾರೆ. ಎಚ್.ಡಿ. ರೇವಣ್ಣ ಅವರ ಪುತ್ರರಾಗಿರುವ ರೇವಣ್ಣ ಅವರಿಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗುವ ಸಾಧ್ಯತೆಯಿದೆ.
