ದೂರದ ಬೆಟ್ಟ ಕಣ್ಣಿಗೆ ನುಣ್ಣು ಅನ್ನುವ ಹಾಗೆ ಈ ನಾಯಕರ ನಡವಳಿಕೆ'

ಹುಣಸೂರು(ಜು.06): ಬೂದಿ ಕೆಂಡದಂತಿದ್ದ ಜೆಡಿಎಸ್'ನಲ್ಲಿ ಬಿನ್ನಮತ ಬೀದಿಗೆ ಬಂದಿದೆ. ಸ್ವತಃ ಚಿಕ್ಕಪ್ಪನ ವಿರುದ್ಧವೇ ಮಗ ತೊಡೆ ತಟ್ಟಿದ್ದು, ತಮ್ಮ ಪಕ್ಷದ ಅಸಮಾಧಾನವನ್ನು ಬಹಿರಂಗವಾಗಿ ಹೊರಹಾಕಿದ್ದಾರೆ.

ಇಂದು ಹುಣಸೂರಿನ ಗೌರಮ್ಮ ಪುಟ್ಟಸ್ವಾಮಪ್ಪ ಕಲ್ಯಾಣ ಮಂಟಪದಲ್ಲಿ ನಡೆದ ಜೆಡಿಎಸ್ ಜಾಗೃತ ಸಮಾವೇಶದಲ್ಲಿ ಮಾತೃ ಪಕ್ಷದ ತಮ್ಮ ಮನಸ್ಸಿನ ನೋವನ್ನು ಹೊರಹಾಕಿದ ಎಚ್'.ಡಿ. ರೇವಣ್ಣ ಅವರ ಮೊಮ್ಮಗ ಪ್ರಜ್ವಲ್ ರೇವಣ್ಣ' ನಮ್ಮ ಪಕ್ಷದಲ್ಲಿ ರೋಗವಿದ್ದು, ನಿಷ್ಠೆಯಿಂದ ಕೆಲಸ ಮಾಡುವವರನ್ನ ಹಿಂಬದಿ ಸೀಟಿನಲ್ಲಿ ಕೂರಿಸುತ್ತೇವೆ. ಸೂಟ್ ಕೇಸ್ ಕೊಟ್ಟವರನ್ನ ಮುಂದೆ ಕೂರಿಸುತ್ತೇವೆ. ಕೆಲವು ನಾಯಕರು ಇದ್ದಾರೆ. ಎರಡು ಪಕ್ಷಗಳಲ್ಲಿ ಕಾಲು ಇಟ್ಟುಕೊಂಡಿದ್ದಾರೆ. ದೂರದ ಬೆಟ್ಟ ಕಣ್ಣಿಗೆ ನುಣ್ಣು ಅನ್ನುವ ಹಾಗೆ ಈ ನಾಯಕರ ನಡವಳಿಕೆ' ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಪ್ರಜ್ವಲ್ ರೇವಣ್ಣ ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸಬೇಕೆಂಬ ಆಸೆ ಇರಿಸಿಕೊಂಡಿದ್ದರು. ವಿಶ್ವನಾಥ್ ಎಂಟ್ರಿಯಿಂದ ಲೆಕ್ಕಾಚಾರ ಉಲ್ಟಾಪಲ್ಟಾ ಆದ ಕಾರಣ ಈ ರೀತಿಯ ಹೇಳಿಕೆ ನೀಡಿದ್ದಾರೆ.