ನನಗೂ 86 ವರ್ಷ ವಯಸ್ಸಾಗಿದೆ. ಪ್ರಜ್ವಲ್ ಕಣಕ್ಕಿಳಿಸುವ ಬಗ್ಗೆ ಯೋಚನೆ ಇದೆ

ಹಾಸನ(ನ.30): ಮುಂದಿನ ಲೋಕಸಭೆಯಲ್ಲಿ ಹಾಸನದಿಂದ ಪ್ರಜ್ವಲ್ ರೇವಣ್ಣ ಕಣಕ್ಕಿಳಿಸುವ ಬಗ್ಗೆ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಸುಳಿವು ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಆಸಕ್ತಿಯಿಲ್ಲ. ನನಗೂ 86 ವರ್ಷ ವಯಸ್ಸಾಗಿದೆ. ಪ್ರಜ್ವಲ್ ಕಣಕ್ಕಿಳಿಸುವ ಬಗ್ಗೆ ಯೋಚನೆ ಇದೆ. ಕುಟುಂಬದವರಿಗೆ ಕೊಡಬೇಕೆನ್ನುವ ಕಾರಣದಿಂದಲ್ಲ. ಯಾರಾದರೂ ಸೂಕ್ತ ಅಭ್ಯರ್ಥಿ ಇದ್ದರೂ ಅವಕಾಶ ನೀಡಲಾಗುವುದು' ಎಂದು ಹೇಳಿದರು.