ರಾಹುಲ್ ವರ್ತನೆ ಖಂಡಿಸಿದ ಪ್ರಹ್ಲಾದ್ ಜೋಷಿಲೋಕಸಭೆ ಘನತೆ ಕುಂದಿಸಿದ ರಾಹುಲ್ ಗಾಂಧಿಪ್ರಧಾನಿ ಅಪ್ಪಿಕೊಂಡಿದ್ದು ಬಾಲಿಶ ವರ್ತನೆಹುಬ್ಬಳ್ಳಿಯಲ್ಲಿ ಪ್ರಹ್ಲಾದ್ ಜೋಷಿ ಕಿಡಿ  

ಹುಬ್ಬಳ್ಳಿ(ಜು.21): ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಪ್ಪಿಕೊಳ್ಳುವ ಮೂಲಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸದನದ ಗೌರವವನ್ನು ಮಣ್ಣುಪಾಲು ಮಾಡಿದ್ದಾರೆ ಎಂದು ಬಿಜೆಪಿ ಸಂಸದ ಪ್ರಹ್ಲಾದ್ ಜೋಷಿ ಕಿಡಿ ಕಾರಿದ್ದಾರೆ.

ರಾಹುಲ್ ಗಾಂಧಿ ಪ್ರಧಾನಿ ಅವರನ್ನು ಅಪ್ಪಿಕೊಂಡಿದ್ದು, ನಂತರ ಕಣ್ಣು ಹೊಡೆದಿದ್ದು, ಇವೆಲ್ಲವೂ ಬಾಲಿಶತನದ ಪರಮಾವಧಿ ಎಂದು ಜೋಷಿ ಹರಿಹಾಯ್ದಿದ್ದಾರೆ.

ಲೋಕಸಭೆಯಲ್ಲಿ ಸಿನಿಮಾ ನಟರಂತೆ ವರ್ತಿಸಿರುವ ರಾಹುಲ್, ಸಂಸತ್ತಿನ ಗೌರವವನ್ನು ಮಣ್ಣುಪಾಲು ಮಾಡಿದ್ದಾರೆ ಎಂದಿರುವ ಜೋಷಿ, ಪ್ರಧಾನಿ ಮತ್ತು ರಕ್ಷಣಾ ಸಚಿವರ ವಿರುದ್ಧ ಸುಳ್ಳು ಆರೋಪ ಮಾಡಿ ತಾವೆಷ್ಟು ಅಪ್ರಬುದ್ಧರು ಎಂಬುದನ್ನು ತಿಳಿಸಿದ್ಧಾರೆ ಎಂದು ಲೇವಡಿ ಮಾಡಿದರು.

ಕೇಂದ್ರ ಸಕಾರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದ ವಿಪಕ್ಷಗಳು, ದೇಶದ ಜನರ ಮುಂದೆ ಬೆತ್ತಲಾಗಿದ್ದು, ಪ್ರಧಾನಿ ಮೋದಿ ಅವರ ಮೇಲೆ ದೇಶ ಸಂಪೂರ್ಣ ಭರವಸೆ ಇಟ್ಟಿದೆ ಎಂಬುದು ಮತ್ತೆ ಸಾಬೀತಾಗಿದೆ ಎಂದು ಜೋಷಿ ಹೇಳಿದರು.

ಇದೇ ವೇಳೆ ಮಾಜಿ ಪ್ರಧಾನಿ ಹೆಚ್.ಡಿ. ದೇವೆಗೌಡರ ವಿರುದ್ಧ ಹರಿಹಾಯ್ದಿರುವ ಜೋಷಿ, ಗೌಡರಿಗೆ ಕಾವೇರಿ ಮೇಲಿರುವಷ್ಟು ಮಮತೆ ಕೃಷ್ಣೆ ಮೇಲೆ ಇಲ್ಲ ಎಂದು ಆರೋಪಿಸಿದ್ದಾರೆ. ಜೆಡಿಎಸ್ ಯಾವಾಗಲೂ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಲೇ ಬಂದಿದ್ದು, ಇದೀಗ ಮೊಸಳೆ ಕಣ್ಣೀರು ಸುರಿಸುವುದನ್ನು ಜನ ಸಹಿಸುವುದಿಲ್ಲ ಎಂದು ಜೋಷಿ ಆಕ್ರೋಶ ವ್ಯಕ್ತಪಡಿಸಿದರು.