ಪ್ರಭುದೇವ್ ಅವರ ಬೆನ್ನು ಉಳುಕಿದ ಪರಿಣಾಮ ಇದೀಗ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮುಬೈ (ಸೆ.16): ಇಂಡಿಯಾದ ಮೈಕಲ್ ಜಾಕ್ಸನ್ ಅಂತಾನೇ ಕರಿಸಿಕೊಳ್ಳುವ ಪ್ರಭುದೇವ್ ಅಭಿನೇತ್ರಿ ಚಿತ್ರದ ಸಾಂಗ್ ಶೂಟಿಂಗ್ ವೇಳೆ ಗಾಯ ಮಾಡಿಕೊಂಡ ಘಟನೆ ನೆಡೆದಿದೆ.

ಟುಟಕ್ ಟುಟಕ್ ಟುಟಿಯಾಚಿತ್ರದ ಹಾಡಿನ ಶೂಟಿಂಗ್ ಸಂದರ್ಭದಲ್ಲಿ ಬೆನ್ನಿಗೆ ತೀವ್ರ ಗಾಯವಾದ ಪರಿಣಾಮ ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿತ್ರದ ಟೈಟಲ್ ಸಾಂಗ್ ನ ಶೂಟಿಂಗ್ ನಡೆಯುತ್ತಿದ್ದು ಅಲ್ಲಿ ಸುಮಾರು 500 ಸಹ ಕಲಾವಿದರು ಮತ್ತು 350 ಪ್ರೊಫೆಶನಲ್ ಡ್ಯಾನ್ಸರ್ ಗಳು ಚಿತ್ರೀಕರಣದ ಸಮಯದಲ್ಲಿ ಭಾಗಿಯಾಗಿದ್ದರು. ಹಾಡಿನ ಚಿತ್ರೀಕರಣ ಭರದಿಂದ ಸಾಗುತ್ತಿತ್ತು, ಇದ್ದಕ್ಕಿದ್ದಂತೆ ಪ್ರಭುದೇವ್ ಅವರ ಬೆನ್ನು ಉಳುಕಿದ ಪರಿಣಾಮ ಇದೀಗ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.