ಜಗತ್ತಿನ ಅತ್ಯಂತ ಪ್ರಭಾವಿ ಪಾಸ್‌ಪೋರ್ಟ್‌ ಪಟ್ಟಿ ಬಿಡುಗಡೆಯಾಗಿದೆ. 59 ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣಿಸಬಹುದಾದ ಭಾರತದ ಪಾಸ್‌ಪೋರ್ಟ್ ಈ ಪಟ್ಟಿಯಲ್ಲಿ 76ನೇ ಸ್ಥಾನ ಪಡೆದಿದೆ. ಭಾರತದೊಂದಿಗೆ ಉಜ್ಬೆಕಿಸ್ತಾನ್‌ ಸಹ ಇದೇ ಸ್ಥಾನ ಪಡೆದುಕೊಂಡಿದೆ.

ನವದೆಹಲಿ: ಜಗತ್ತಿನ ಅತ್ಯಂತ ಪ್ರಭಾವಿ ಪಾಸ್‌ಪೋರ್ಟ್‌ ಪಟ್ಟಿ ಬಿಡುಗಡೆಯಾಗಿದೆ. 59 ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣಿಸಬಹುದಾದ ಭಾರತದ ಪಾಸ್‌ಪೋರ್ಟ್ ಈ ಪಟ್ಟಿಯಲ್ಲಿ 76ನೇ ಸ್ಥಾನ ಪಡೆದಿದೆ. ಭಾರತದೊಂದಿಗೆ ಉಜ್ಬೆಕಿಸ್ತಾನ್‌ ಸಹ ಇದೇ ಸ್ಥಾನ ಪಡೆದುಕೊಂಡಿದೆ.

ನಾಗರಿಕತ್ವ ಯೋಜನಾ ಸಂಸ್ಥೆ ಹೆನ್ಲಿ ಆ್ಯಂಡ್ ಪಾರ್ಟ್ನರ್ಸ್ ಈ ವಾರ್ಷಿಕ ಪಾಸ್‌ಪೋರ್ಟ್ ಸೂಚ್ಯಂಕ ಸಿದ್ಧಪಡಿಸಿದೆ. ಎಷ್ಟು ದೇಶಗಳಿಗೆ ವೀಸಾ ಇಲ್ಲದೆಯೂ ಪಾಸ್ ಪೋರ್ಟ್ ಮೂಲಕ ಪ್ರಯಾಣಿಸಬಹುದು ಸೇರಿ ಇನ್ನಿತರೆ ಮಾನದಂಡಗಳ ಮೇಲೆ ಈ ಪಟ್ಟಿ ಸಿದ್ಧಪಡಿಸಲಾಗುತ್ತದೆ.

ಯಾವ ದೇಶದ ಪಾಸ್‌ಪೋರ್ಟ್‌ಗೆ ಎಷ್ಟನೇ ಸ್ಥಾನ

ಅತ್ಯಂತ ಪ್ರಭಾವಿಶಾಲಿ ಪಾಸ್‌ಪೋರ್ಟ್ ಎಂಬ ಖ್ಯಾತಿಗೆ ಪಾತ್ರವಾಗಿದ್ದ ಸಿಂಗಾಪುರ ತನ್ನ ಸ್ಥಾನವನ್ನು ಕಳೆದುಕೊಂಡಿದ್ದು, ಜಪಾನ್ ಪಾಸ್‌ಪೋರ್ಟ್ ಮೊದಲ ಸ್ಥಾನದಲ್ಲಿದೆ. ಜರ್ಮನಿ ಮತ್ತು ಸಿಂಗಾಪುರ ಎರಡೂ ದೇಶಗಳಿಗೂ ದ್ವಿತೀಯ ಸ್ಥಾನ ಬಂದಿದೆ. ಫನ್ಲ್ಯಾಂಡ್, ಫ್ರಾನ್ಸ್, ಇಟಲಿ, ದಕ್ಷಿಣ ಕೊರಿಯಾ, ಸ್ಪೈನ್, ಸ್ವಿಡನ್‌ಗೆ ಮೂರನೇ ಸ್ಥಾನ ಲಭಿಸಿದರೆ, ಆಸ್ಟ್ರೇಯಾ, ಅಮೆರಿಕ, ಇಂಗ್ಲೆಂಡ್, ನೆದರ್ರ್ಲ್ಯಾಂಡ್‌ಗೆ ನಾಲ್ಕನೇ ಸ್ಥಾನದಲ್ಲಿವೆ. ಬೆಲ್ಜಿಯಂ, ಆಸ್ಟ್ರೇಲಿಯಾ, ಸ್ವಿಡ್ಜರ್‌ಲ್ಯಾಂಡ್, ಐರ್ಲೆಂಡ್ ಮುಂತಾದ ದೇಶಗಳು ಐದನೇ ಸ್ಥಾನದಲ್ಲಿವೆ.

ಭಾರತದ ನೆರೆ ರಾಷ್ಟ್ರಗಳಾದ ಬಾಂಗ್ಲಾದೇಶ, ನೇಪಾಳ ಹಾಗೂ ಪಾಕಿಸ್ತಾನವೂ ಪ್ರಭಾವಶಾಲಿ ಪಾಸ್‌ಪೋರ್ಟ್ ಪಟ್ಟಿಯಲ್ಲಿ ಈ ವರ್ಷ ಸ್ಥಾನ ಪಡೆದುಕೊಂಡಿವೆ. ಸುಮಾರು 200 ದೇಶಗಳು ಈ ಪಟ್ಟಿಯಲ್ಲಿವೆ.