ವಿದ್ಯುತ್ ಖರೀದಿ ಗುತ್ತಿಗೆಯನ್ನು ಮೊದಲು JSW ಎನರ್ಜಿ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ಬಳಿಕ ಆ ಗುತ್ತಿಗೆ ರದ್ದುಪಡಿಸಿ ಮತ್ತೆ ಅದೇ ಕಂಪನಿಗೆ ಅದೇ ಗುತ್ತಿಗೆ ನೀಡಿತ್ತು. ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿನ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿತ್ತು.

ಬೆಂಗಳೂರು(ನ.21): ಯಡಿಯೂರಪ್ಪ ಸರ್ಕಾರದಲ್ಲಿ ಇಂಧನ ಸಚಿವೆಯಾಗಿದ್ದ ಶೋಭಾ ಕರಂದ್ಲಾಜೆ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 1,046 ಕೋಟಿ ರುಪಾಯಿ ನಷ್ಟ ಉಂಟು ಮಾಡಿದ್ದಾರೆ ಎಂದು ಇಂಧನ ಇಲಾಖೆ ಹಗರಣದ ಕುರಿತ ವರದಿಯನ್ನು ಇಂದು ವಿಧಾನಸಭೆಯಲ್ಲಿ ಮಂಡಿಸಲಾಗಿದೆ.

ವಿದ್ಯುತ್ ಖರೀದಿ ಗುತ್ತಿಗೆಯನ್ನು ಮೊದಲು JSW ಎನರ್ಜಿ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ಬಳಿಕ ಆ ಗುತ್ತಿಗೆ ರದ್ದುಪಡಿಸಿ ಮತ್ತೆ ಅದೇ ಕಂಪನಿಗೆ ಅದೇ ಗುತ್ತಿಗೆ ನೀಡಿತ್ತು. ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿನ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿತ್ತು. ಬಿಎಸ್'ವೈ ನೇತೃತ್ವದ ಸಭೆಯ ನಿರ್ಧಾರದಿಂದಲೇ ಸರ್ಕಾರಕ್ಕೆ ಸಾವಿರಾರು ಕೋಟಿ ರುಪಾಯಿ ನಷ್ಟ ಉಂಟಾಗಿದೆ ಎಂದು ಇಂಧನ ಇಲಾಖೆ ಹಗರಣದ ಕುರಿತು ತನಿಖೆ ನಡೆಸಿದ ಸಮಿತಿ ವರದಿ ಮಂಡನೆ ಮಾಡಿದೆ.

2014ರಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ನೇತೃತ್ವದ 8 ಜನರ ಸದನ ಸಮಿತಿಯ ತಂಡ 2010ರಿಂದ 2014ರವರೆಗೆ ವಿದ್ಯುತ್ ಖರೀದಿಯಲ್ಲಿನ ಅವ್ಯವಹಾರದ ಬಗ್ಗೆ ತನಿಖೆ ನಡೆಸಿತ್ತು. ಜಿಂದಾಲ್ ಸಂಸ್ಥೆಯಿಂದ ಪ್ರತಿ ಯೂನಿಟ್'ಗೆ 3.50 ರುಪಾಯಿ ನೀಡಲು ಸಚಿವೆ ಶೋಭಾ ಕರಂದ್ಲಾಜೆ ಒಪ್ಪಿಕೊಂಡಿತ್ತು. ಆ ಬಳಿಕ ಅದೇ ಕಂಪನಿಗೆ ಪ್ರತಿ ಯೂನಿಟ್'ಗೆ 6.20 ರುಪಾಯಿಯಂತೆ ಸರ್ಕಾರ ಗುತ್ತಿಗೆ ನೀಡಿತ್ತು. ಈ ನಿರ್ಧಾರದಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ನಷ್ಟವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.