ಆಫೀಸ್ ಕರೆಂಟ್ ಬಿಲ್ಲೇ ಕಟ್ಟಿಲ್ಲ, ಯುದ್ಧ ಮಾಡುತ್ತಂತೆ ಪಾಕ್!
ಪಾಕಿಸ್ತಾನ ಪ್ರಧಾನಿ ಸಚಿವಾಲಯದ ವಿದ್ಯುತ್ ಬಿಲ್ ಕಟ್ಟಲು ಹಣವಿಲ್ಲ| ಜಮ್ಮು ಕಾಶ್ಮೀರ ವಿಚಾರವಾಗಿ ಕಾಲು ಕೆರೆದು ಜಗಳಕ್ಕೆ ಬಂದಿದ್ದ ಪಾಕಿಸ್ತಾನಕ್ಕೆ ತೀವ್ರ ಮುಜುಗರ| 40 ಲಕ್ಷಕ್ಕೂ ಅಧಿಕ ಮೊತ್ತದ ಬಿಲ್ ಪಾವತಿಸುವಂತೆ ಪ್ರಧಾನಿಗೆ ಸಿಕ್ತು ನೋಟಿಸ್
ಇಸ್ಲಮಾಬಾದ್[ಆ.29]: ಜಮ್ಮು ಕಾಶ್ಮೀರ ವಿಚಾರವಾಗಿ ಭಾರತ ತೆಗೆದುಕೊಂಡ ನಿರ್ಧಾರ ಪಾಕಿಸ್ತಾನದ ನಿದ್ದೆಗೆಡಿಸಿದೆ. ಹೀಗಿರುವಾಗ ಭಾರತದ ವಿರುದ್ಧ ಕಾಲು ಕೆರೆದು ಜಗಳಕ್ಕಿಳಿದಿರುವ ಪಾಕ್ ಒಂದಾದ ಬಳಿಕ ಮತ್ತೊಂದರಂತೆ ಬೆದರಿಕೆಯೊಡ್ಡುತ್ತಿದೆ. ಆದರೀಗ ಹೀಗೆ ಬೆದರಿಕೆಗಳನ್ನು ನೀಡುತ್ತಿರುವ ಪಾಕಿಸ್ತಾನ ತೀವ್ರ ಆರ್ಥಿಕ ಮುಗ್ಗಟ್ಟು ಅನುಭವಿಸುತ್ತಿದ್ದು, ಸಚಿವಾಲಯದ ವಿದ್ಯುತ್ ಬಿಲ್ ಪಾವತಿಸಲೂ ಹಣವಿಲ್ಲದೆ ಪರದಾಡುತ್ತಿದೆ ಎಂಬ ವಿಚಾರ ಬಯಲಾಗಿದೆ.
ಹೌದು ಈ ಕುರಿತಾಗಿ ವರದಿ ಮಾಡಿರುವ ಪಾಕ್ ಮಾಧ್ಯಮಗಳು ಪ್ರಧಾನಿ ಇಮ್ರಾನ್ ಖಾನ್ ಸಚಿವಾಲಯದ ಬರೋಬ್ಬರಿ 41 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಪಾವತಿಸಬೇಕು. ಈ ಬಿಲ್ ಕೂಡಲೇ ಪಾವತಿಸಿ ಎಂದು ಇಸ್ಲಮಾಬಾದ್ ಎಲೆಕ್ಟ್ರಿಸಿಟಿ ಸಪ್ಲೈ ಸಂಸ್ಥೆ ಪ್ರಧಾನಿಗೆ ನೋಟಿಸ್ ಜಾರಿ ಮಾಡಿದೆ ಎಂದು ತಿಳಿಸಿವೆ.
ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸಚಿವಾಲಯ ಕಳೆದ ತಿಂಗಳು, ಜುಲೈನಲ್ಲಿ 35 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಮೊತ್ತ ಪಾವತಿಸಬೇಕಿತ್ತು. ಆದರೀಗ ಈ ಮೊತ್ತ 41ಲಕ್ಷಕ್ಕೇರಿದೆ. ಹಲವಾರು ಬಾರಿ ನೋಟಿಸ್ ನೀಡಿದ್ದರೂ ಸಚಿವಾಲಯ ವಿದ್ಯುತ್ ಪಾವತಿಸಿಲ್ಲ ಎಂಬುವುದು IESCO ಆರೋಪವಾಗಿದೆ.