ನವದೆಹಲಿ: ಪಾವತಿ ಬ್ಯಾಂಕ್ ಸೇವೆ ಆರಂಭಿಸಿದ ಬೆನ್ನಲ್ಲೇ, ಅಂಚೆ ಇಲಾಖೆಯು ಇನ್ನೆರಡು ವರ್ಷಗಳಲ್ಲಿ ವಿಮಾ ಸಂಸ್ಥೆಯನ್ನೂ ಆರಂಭಿಸಲು ಸಿದ್ಧತೆ ನಡೆಸುತ್ತಿದೆ ಎಂದು ಕೇಂದ್ರ ಸಚಿವ ಮನೋಜ್ ಸಿನ್ಹಾ ಹೇಳಿದ್ದಾರೆ. ಅಂಚೆ ಇಲಾಖೆ ಈಗ ಸ್ವಯಂ ಪುನಶ್ಚೇತನ ಪಡೆಯುತ್ತಿದೆ.

ಪಾರ್ಸೆಲ್ ಡೈರೆಕ್ಟೊರೇಟ್ ಮತ್ತು ಪಾವತಿ ಬ್ಯಾಂಕ್ ಸೇವೆ ಆರಂಭಿಸಿದ ಬಳಿಕ, ಇಲಾಖೆಯು ವಿಶೇಷ ಉದ್ಯಮ ಘಟಕವಾಗಿ ವಿಮಾ ಸಂಸ್ಥೆಯನ್ನು ಆರಂಭಿಸಲು ನಿರ್ಧರಿಸಿದೆ ಎಂದು ಸಿನ್ಹಾ ಹೇಳಿದ್ದಾರೆ. 

ವಿಮಾ ಸಂಸ್ಥೆಯನ್ನು ಸ್ಥಾಪಿಸಲು ಸಲಹಾಗಾರರನ್ನು ನೇಮಿಸಲು ಮುಂದಿನ ವಾರ ಪ್ರಕಟಣೆ ಜಾರಿಯಾಗಲಿದೆ ಎಂದೂ ಅವರು ಹೇಳಿದ್ದಾರೆ.