ಪಿಲಿಫ್ಫೀನ್ಸ್‌ನ ವಾಣಿಜ್ಯ ಕೇಂದ್ರ ಮನಿಲಾದಲ್ಲಿ ಆಗಬಾರದ್ದು ಆಗಿ ಹೋಗಿದೆ. ರಸ್ತೆಯಲ್ಲಿ ಹೋಗುತ್ತಿದ್ದವರೆಲ್ಲಾ ಒಂದು ಕ್ಷಣ ವಾಹನ ನಿಲ್ಲಿಸಿ ಆ ದೃಶ್ಯವನ್ನು ಕಣ್ತುಂಬಿಕೊಂಡಿದ್ದಾರೆ. ಅಷ್ಟಕ್ಕೂ ಆಗಿದ್ದೇನೆಂದರೆ ಜನನಿಬಿಡ ಸ್ಥಳದಲ್ಲಿ ಹಾಕಿದ್ದ ಡಿಜಿಟಲ್‌ ಸೂಚನಾ ಫಲಕದಲ್ಲಿ ಅಚಾನಕ್‌ ಆಗಿ ಅಶ್ಲೀಲ ವಿಡಿಯೋವೊಂದು ಪ್ರಸಾರವಾಗಿದೆ.

ಮನೀಲಾ: ಪಿಲಿಫ್ಫೀನ್ಸ್‌ನ ವಾಣಿಜ್ಯ ಕೇಂದ್ರ ಮನಿಲಾದಲ್ಲಿ ಆಗಬಾರದ್ದು ಆಗಿ ಹೋಗಿದೆ. ರಸ್ತೆಯಲ್ಲಿ ಹೋಗುತ್ತಿದ್ದವರೆಲ್ಲಾ ಒಂದು ಕ್ಷಣ ವಾಹನ ನಿಲ್ಲಿಸಿ ಆ ದೃಶ್ಯವನ್ನು ಕಣ್ತುಂಬಿಕೊಂಡಿದ್ದಾರೆ. ಅಷ್ಟಕ್ಕೂ ಆಗಿದ್ದೇನೆಂದರೆ ಜನನಿಬಿಡ ಸ್ಥಳದಲ್ಲಿ ಹಾಕಿದ್ದ ಡಿಜಿಟಲ್‌ ಸೂಚನಾ ಫಲಕದಲ್ಲಿ ಅಚಾನಕ್‌ ಆಗಿ ಅಶ್ಲೀಲ ವಿಡಿಯೋವೊಂದು ಪ್ರಸಾರವಾಗಿದೆ.

30 ಸೆಕೆಂಡ್‌ ವಿಡಿಯೋ ಪ್ರಸಾರ ವಾಗಿದ್ದು, ತಕ್ಷಣವೇ ಎಚ್ಚೆತ್ತ ಅಧಿಕಾರಿಗಳು ಸ್ಕ್ರೀನ್‌ ಅನ್ನು ಆಫ್‌ ಮಾಡಿದ್ದಾರೆ. ಆದರೆ ಅಷ್ಟರಲ್ಲಾಗಲೇ ಪ್ರಮಾದ ಆಗಿಹೋಗಿತ್ತು. ಕೆಲವರು ತಮ್ಮ ಮೊಬೈಲ್‌ನಲ್ಲಿ ವಿಡಿಯೋವನ್ನು ಸೆರೆಹಿಡಿದಿದ್ದಾರೆ.

ಕೊನೆಗೆ ಮುಜುಗರಕ್ಕೀಡಾದ ಮಾಕಟಿ ನಗರದ ಮೇಯರ್‌ ತನಿಖೆಗೆ ಆದೇಶಿಸಿದ್ದಾರೆ. ತನಿಖೆ ಪೂರ್ಣಗೊಳ್ಳುವ ವರೆಗೂ ಸೂಚನಾ ಫಲಕವನ್ನು ಆನ್‌ ಮಾಡದಂತೆ ಸೂಚನೆ ನೀಡಿದ್ದಾರೆ.