Asianet Suvarna News Asianet Suvarna News

ಮೆಟ್ರೋ ಸ್ಟೇಷನ್ ಟಿವಿ ಪರದೆಯಲ್ಲಿ ನೀಲಿಚಿತ್ರ ನೋಡಿ ದಂಗಾದ ಪ್ರಯಾಣಿಕರು!

ಇಲ್ಲಿನ ರಾಜೀವ್ ಚೌಕ್ ಮೆಟ್ರೋ ಸ್ಟೇಷನ್ ನ ಜಾಹಿರಾತು ಪರದೆಯಲ್ಲಿ ಆಕಸ್ಮಿಕವಾಗಿ ನೀಲಿಚಿತ್ರ ಪ್ರಸಾರವಾಗಿರುವ ಅಚಾತುರ್ಯ ನಡೆದಿದೆ.

Porn clip plays on big screen at Rajiv Chowk metro station DMRC orders probe

ನವದೆಹಲಿ (ಏ.15):ಇಲ್ಲಿನ ರಾಜೀವ್ ಚೌಕ್ ಮೆಟ್ರೋ ಸ್ಟೇಷನ್ ನ ಜಾಹಿರಾತು ಪರದೆಯಲ್ಲಿ ಆಕಸ್ಮಿಕವಾಗಿ ನೀಲಿಚಿತ್ರ ಪ್ರಸಾರವಾಗಿರುವ ಅಚಾತುರ್ಯ ನಡೆದಿದೆ.

ರಾಜೀವ್ ಚೌಕ್ ಮೆಟ್ರೋ ಸ್ಟೇಷನ್ ನ ದೊಡ್ಡ ಎಲ್ ಇಡಿ ಪರದೆಯಲ್ಲಿ ನೀಲಿ ಚಿತ್ರ (ಪೋರ್ನ್ ವಿಡಿಯೋ) ಪ್ರಸಾರವಾಗಿದ್ದು, ಿದನ್ನು ನೋಡಿ ಪ್ರಯಾಣಿಕರು ದಂಗಾಗಿದ್ದಾರೆ. ಕೆಲವರು ಇದನ್ನು ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು, ಈ ವಿಡಿಯೋ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ಕೆಲವರು ಗೊತ್ತಿದ್ದೋ, ಗೊತ್ತಿಲ್ಲದೆಯೋ ಟಿವಿ ಸ್ಕ್ರೀನ್ ಬಳಿ ಹೋದರೆ ಇನ್ನು ಕೆಲವರು ತಮ್ಮ ಪಾಡಿಗೆ ತಾವು ಮೆಟ್ಟಿಲ ಕಡೆ ಹೋಗುತ್ತಿದ್ದರು ಎನ್ನಲಾಗಿದೆ.

ಈ ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಡಿಎಮ್ಆರ್ ಸಿ ಆದೇಶ ನೀಡಿದ್ದು, ಜಾಹಿರಾತಿನಲ್ಲಿ ಯಾವ ಪೋರ್ನ್ ನಲ್ಲಿ ಪ್ಲೇ ಮಾಡಲಾಗಿದೆ ಎಂದು ಸ್ಪಷ್ಟೀಕರಣ ನೀಡಿದೆ.

Follow Us:
Download App:
  • android
  • ios