ಐದು ದಶಕಗಳ ಕಾಲ ತಮ್ಮ ಮಧುರ ಕಂಠ ಸಿರಿಯಿಂದ ಸಂಗೀತಪ್ರಿಯರನ್ನು ರಂಜಿಸಿದ ಗಾನಕೋಗಿಲೆ ಎಸ್.ಜಾನಕಿ ಗಾಯನ ಲೋಕಕ್ಕೆ ವಿದಾಯ ಹೇಳಿದ್ದಾರೆ.
ಮೈಸೂರು (ಅ.29): ಐದು ದಶಕಗಳ ಕಾಲ ತಮ್ಮ ಮಧುರ ಕಂಠ ಸಿರಿಯಿಂದ ಸಂಗೀತಪ್ರಿಯರನ್ನು ರಂಜಿಸಿದ ಗಾನಕೋಗಿಲೆ ಎಸ್.ಜಾನಕಿ ಗಾಯನ ಲೋಕಕ್ಕೆ ವಿದಾಯ ಹೇಳಿದ್ದಾರೆ.
ಮೈಸೂರಿನ ಮಾನಸಗಂಗೋತ್ರಿ ಬಯಲು ರಂಗಮಂದಿರದಲ್ಲಿ ತಮ್ಮ ಕೊನೆಯ ಕಾರ್ಯಕ್ರಮವನ್ನು ನಡೆಸಿಕೊಡುವ ಮೂಲಕ ಗಾಯನ ಲೋಕಕ್ಕೆ ವಿದಾಯ ಹೇಳಿದರು. ಗಣ್ಯಾತಿಗಣ್ಯರು, ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
