ವ್ಯಾಟಿಕನ್ ಸಿಟಿ(ಡಿ.25): ಉಗ್ರರ ದಾಳಿಯಲ್ಲಿ ಹತರಾದ ಕುಟುಂಬಕ್ಕೆ ಸಾಂತ್ವನ ಹೇಳುವುದರೊಂದಿಗೆ   ವಿಶ್ವದ ಜನತೆಗೆ 120 ಕೋಟಿ ಕ್ರೈಸ್ತರ ಪ್ರತಿನಿಧಿ ಪೋಪ್ ಪ್ರಾನ್ಸಿಸ್ ಶಾಂತಿಯ ಸಂದೇಶವನ್ನು ಸಾರಿದರು.

ಕ್ರೈಸ್ತರ ಪವಿತ್ರ ಹಬ್ಬ ಕ್ರಿಸ್'ಮಸ್ ಪ್ರಯುಕ್ತ ವ್ಯಾಟಿಕನ್ ಪಟ್ಟಣದಲ್ಲಿ ತಮ್ಮ ಸಾವಿರಾರು ಬಾಂಧವರನ್ನು ಉದ್ದೇಶಿಸಿ ಮಾತನಾಡಿ, ಸಿರಿಯಾದಲ್ಲಿ  ಕಳೆದ 6 ವರ್ಷಗಳಲ್ಲಿ ಅತಿ ಹೆಚ್ಚು ರಕ್ತ ಹರಿದಿದೆ. ನಿತ್ಯವು ಭಯೋತ್ಪಾದನೆಗೆ ನೂರಾರು ಮಂದಿ ಬಲಿಯಾಗುತ್ತಿದ್ದಾರೆ. ಭಯೋತ್ಪಾದನೆಯನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ಅಂತರರಾಷ್ಟ್ರೀಯ ಸಮುದಾಯ ಸಕ್ರೀಯವಾಗಿ ಸಮಾಲೋಚಕ ಪರಿಹಾರವನ್ನು ಹುಡುಕುವ ಸೂಕ್ತ ಸಮಯ ಇದಾಗಿದೆ ಎಂದು ತಿಳಿಸಿದರು.

ದ್ವೇಷವನ್ನು ಬದಿಗೊತ್ತಿ ಶಾಂತಿಯನ್ನು ಕಾಪಾಡಿ ಹೊಸ ಇತಿಹಾಸ ಸೃಷ್ಟಿಸಲು ಇಸ್ರೇಲ್ ಹಾಗೂ ಪ್ಯಾಲಿಸ್ಟೇನ್ ಸಂಕಲ್ಪ ಹಾಗೂ ಧೈರ್ಯ ತೋರಬೇಕು ಇದೇ ಸಂದರ್ಭದಲ್ಲಿ ಹೇಳಿದರು.