ಮಂಗಳೂರು (ಸೆ.18): ಕಾವೇರಿ ನದಿ ನೀರು ಹಂಚಿಕೆ ವಿವಾದವು ಬೇಗನೇ ಬಗೆಹರಿಯಲು ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿಯವರು ಕುದ್ರೋಳಿ ಗೋಕರ್ಣನಾಥೇಶ್ವರನ ಮೊರೆ ಹೋಗಿದ್ದಾರೆ.
ಕಾವೇರಿ ವಿವಾದ ಶೀಘ್ರವೇ ಬಗೆಹರಿಸುವಂತೆ ಪ್ರಾರ್ಥಿಸಿ ಜನಾರ್ದನ ಪೂಜಾರಿ ಕುದ್ರೋಳಿಯ ಗೋಕರ್ಣನಾಥೇಶ್ವರ ಸನ್ನಿಧಿಯಲ್ಲಿ ಉರುಳು ಸೇವೆ ಮಾಡಿದ್ದಾರೆ.
ಶಾಸಕ ಜೆ.ಆರ್. ಲೋಬೋ, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ ಸಹಿತ ಹಲವರು ಉರುಳು ಸೇವೆಯಲ್ಲಿ ಭಾಗಿಯಾಗಿ ಪೂಜಾರಿಯವರಿಗೆ ಸಾಥ್ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕೇರಳ, ತಮಿಳುನಾಡಿನಿಂದಲೂ ಭಕ್ತರು ಆಗಮಿಸಿದ್ದು ವಿಶೇಷವಾಗಿತ್ತು.
