. ಕೇಂದ್ರ ಸರ್ಕಾರವು ತಮಿಳುನಾಡಿನ ಜನಪ್ರಿಯ ಧಾರ್ಮಿಕ ಹಬ್ಬ ಸಂಕ್ರಾಂತಿ ಎಂದೇ ಪ್ರಸಿದ್ಧಿಯಾದ 'ಪೊಂಗಲ್' ಹಬ್ಬವನ್ನು ರಾಷ್ಟ್ರೀಯ ಧಾರ್ಮಿಕ ಹಬ್ಬವನ್ನಾಗಿಸಿ ಕಡ್ಡಾಯ ರಜೆ ಘೋಷಿಸಿದೆ
ನವದೆಹಲಿ(ಜ.): ತಮಿಳು ನಾಡು ರಾಜಕೀಯ ನಾಯಕರು ತಾವು ಹಿಡಿದ ಹಠವನ್ನು ಸಾಧಿಸುತ್ತೇವೆ ಎನ್ನುವುದಕ್ಕೆ ಕೇಂದ್ರದ ಮತ್ತೊಂದು ಘೋಷಣೆ ಸಾಕ್ಷಿಯಾಗಿದೆ. ಕೇಂದ್ರ ಸರ್ಕಾರವು ತಮಿಳುನಾಡಿನ ಜನಪ್ರಿಯ ಧಾರ್ಮಿಕ ಹಬ್ಬ ಸಂಕ್ರಾಂತಿ ಎಂದೇ ಪ್ರಸಿದ್ಧಿಯಾದ 'ಪೊಂಗಲ್' ಹಬ್ಬವನ್ನು ರಾಷ್ಟ್ರೀಯ ಧಾರ್ಮಿಕ ಹಬ್ಬವನ್ನಾಗಿಸಿ ಕಡ್ಡಾಯ ರಜೆ ಘೋಷಿಸಿದೆ.
ಈ ಮೊದಲು ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಮಾತ್ರ ಸಂಕ್ರಾಂತಿಗೆ ಕಡ್ಡಾಯ ರಜೆಯಾಗಿ ಘೋಷಿಸಲಾಗಿತ್ತು. ಇನ್ನು ಮುಂದೆ ಪೊಂಗಲ್' ಹಬ್ಬಕ್ಕೆ ರಾಷ್ಟ್ರದಾದ್ಯಂತ ಕಡ್ಡಾಯ ರಜೆ ನೀಡಲಾಗುತ್ತದೆ. ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಅವರ ಒತ್ತಡಕ್ಕೆ ಮಣಿದಿರುವ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
