ವಾಯುಮಾಲಿನ್ಯದಿಂದ ಕಣ್ಣಿನ ಸೋಂಕು ಬೇಗ ಉಂಟಾಗುತ್ತದೆ.

ಹೆಚ್ಚುತ್ತಿರುವ ಮಾಲಿನ್ಯದಿಂದ ಆರೋಗ್ಯಕ್ಕೆ ಅಪಾಯ ಖಂಡಿತ, ಅದರಲ್ಲಿಯೂ ವಾಯುಮಾಲಿನ್ಯದಿಂದ ಕಣ್ಣಿನ ಸೋಂಕು ಬೇಗ ಉಂಟಾಗುತ್ತದೆ. ಕಣ್ಣಿನ ಸೋಂಕು ಉಂಟಾದಾಗ ಕಣ್ಣು ಕೆಂಪಾಗುವುದು, ಕಣ್ಣಿನಲ್ಲಿ ನೀರು ತುಂಬಿಕೊಳ್ಳುವುದು, ಕಣ್ಣಿನಲ್ಲಿ ತುರಿಕೆ ಕಾಣಿಸುತ್ತದೆ. ಈ ಸಮಯದಲ್ಲಿ ಸರಿಯಾದ ಚಿಕಿತ್ಸೆ ಮಾಡಿಕೊಳ್ಳದಿದ್ದರೆ ದೃಷ್ಟಿ ದೋಷ ಉಂಟಾಗುತ್ತದೆ. ಕಾರ್ನಿಯಾ ಸಮಸ್ಯೆಗಳು ಮತ್ತು ಕಣ್ಣಿನ ಅಲರ್ಜಿಯೂ ಉಂಟಾಗುತ್ತದೆ. ಕಣ್ಣಿನ ಸೋಂಕು ತಡೆಯಲು ಇಲ್ಲಿವೆ ಸಲಹೆಗಳು.

ಕಣ್ಣಿನಲ್ಲಿ ತುರಿಕೆ ಯಾಗುತ್ತಿದ್ದರೆ ಕಣ್ಣನ್ನು ಉಜ್ಜ ಬೇಡಿ. ಕಣ್ಣನ್ನು ತಂಪು ನೀರಿನಿಂದ ತೊಳೆಯಿರಿ. ಕಣ್ಣು ಉರಿ ಇದ್ದರೆ ಲೋಳೆಸರ ವನ್ನು ಲೇಪಿಸಿ ಅಥವಾ ಸೌತೆಕಾಯಿ ಚೂರುಗಳನ್ನು ಇಟ್ಟುಕೊಳ್ಳಿ. ಹೊರ ಹೋಗುವಾಗ ಬಿಸಿಲಿನ ಕನ್ನಡಕವನ್ನು ಧರಿಸಿ. ಕಣ್ಣುಗಳು ನೋಯುತ್ತಿದ್ದರೆ ಲೆನ್ಸ್ ಧರಿಸಿ. ಇಲ್ಲದಿದ್ದರೆ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯಿರಿ