(ಚಿತ್ರದಲ್ಲಿ: ಲಕ್ನೋ ಮತದಾನ ಕೇಂದ್ರದಲ್ಲಿ ಮತ ಚಲಾಯಿಸಿದ ಬಳಿಕ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್)

ಲಕ್ನೋ (ಫೆ.19): ಉತ್ತರ ಪ್ರದೇಶದಲ್ಲಿ ಮೂರನೇ ಹಂತದ ಮತದಾನ ಇಂದು ನಡೆಯುತ್ತಿದೆ. 12 ಜಿಲ್ಲೆಗಳ 69 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಲಖನೌ, ಸಮಾಜವಾದಿ ಪಕ್ಷದ ಪ್ರಾಬಲ್ಯವಿರುವ ಕನ್ನೌಜ್‌, ಮೇನ್‌ಪುರಿ ಮತ್ತು ಇಟಾವಾಗಳಲ್ಲಿ ಮತದಾನ ನಡೆಯುತ್ತಿದೆ .

ಇಟಾವಾ, ಎಸ್‌ಪಿ ಸಂಸ್ಥಾಪಕ ಮಲಾಯಂ ಸಿಂಗ್‌ ಯಾದವ್‌ ಅವರ ತವರು ನೆಲ. 2012ರ ಚುನಾವಣೆಯಲ್ಲಿ ಈ 69 ಕ್ಷೇತ್ರಗಳ ಪೈಕಿ 55 ಕ್ಷೇತ್ರಗಳಲ್ಲಿ ಎಸ್‌ಪಿ ಜಯಗಳಿಸಿತ್ತು. ಬಿಎಸ್‌ಪಿ 6, ಬಿಜೆಪಿ 5 ಮತ್ತು ಕಾಂಗ್ರೆಸ್‌ 2 ಸ್ಥಾನಗಳನ್ನು ಗಳಿಸಿದ್ದವು.

ಇವತ್ತು 25,603 ಮತಗಟ್ಟೆಗಳಲ್ಲಿ ವೋಟಿಂಗ್​​ ನಡೆಯುತ್ತಿದ್ದು, 1.1 ಕೋಟಿ ಮಹಿಳೆಯರು, 1,026 ತೃತೀಯ ಲಿಂಗಿಗಳು ಸೇರಿದಂತೆ 2.41 ಕೋಟಿ ಮತದಾರರು ತಮ್ಮ ಅಧಿಕಾರ ಚಲಾಯಿಸಲಿದ್ದಾರೆ.

ಎಸ್‌ಪಿ ಮುಖಂಡ ನರೇಶ್‌ ಅಗರ್‌ವಾಲ್‌ ಮಗ ನಿತಿನ್‌ ಅಗರ್‌ವಾಲ್‌, ಬಿಎಸ್‌ಪಿ ತೊರೆದು ಬಿಜೆಪಿ ಸೇರಿರುವ ಬ್ರಿಜೇಶ್‌ ಪಾಠಕ್‌, ಕಾಂಗ್ರೆಸ್‌ ತ್ಯಜಿಸಿದ್ದ ರೀಟಾ ಬಹುಗುಣ ಜೋಶಿ, ಮುಲಾಯಂ ಸೊಸೆ ಅಪರ್ಣಾ ಯಾದವ್​​, ಎಸ್‌ಪಿ ಮುಖಂಡ ಶಿವಪಾಲ್‌, ಕಾಂಗ್ರೆಸ್‌ ಮುಖಂಡ ಪಿ.ಎಲ್‌. ಪುನಿಯಾ ಮಗ ತನುಜ್‌ ಪುನಿಯಾ ಕಣದಲ್ಲಿರುವ ಪ್ರಮುಖರು.

(ಚಿತ್ರ ಕೃಪೆ: ಏಐಅರ್)