ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಪ್ರಧಾನಿಯನ್ನು ಭೇಟಿ ಮಾಡಿಸಿದ್ದೇವೆ, ಪರಿಹಾರ ಕೊಡಿಸಿದ್ದೇವೆ. ಮುಂದಿನ ಕೆಲಸ ರಾಜ್ಯ ಸರ್ಕಾರದ್ದು. ಆ ಕೆಲಸವನ್ನೂ ಮಾಡಿಸಿಕೊಳ್ಳೋಕೆ ಆಗೋದಿಲ್ಲವೇ? ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಬೆಂಗಳೂರು (ಜ.23): ಬರ ಪರಿಹಾರದ ಹಣ ಕುರಿತಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಧ್ಯೆ ಜಟಾಪಟಿ ಮುಗಿಯುತ್ತಿಲ್ಲ.

ಜನವರಿಗೆ 19ರಂದು ಕೇಂದ್ರ ಸರ್ಕಾರ ಅನುದಾನ ಘೋಷಿಸಿದೆಯೇ ಹೊರತು, ಬಿಡುಗಡೆ ಮಾಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದರು. ತಮ್ಮ ಅಧಿಕೃತ ಟ್ವಿಟರ್​ನಲ್ಲೇ ಅಸಮಾಧಾನ ಹೊರಹಾಕಿದ್ದರು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಪ್ರಧಾನಿಯನ್ನು ಭೇಟಿ ಮಾಡಿಸಿದ್ದೇವೆ, ಪರಿಹಾರ ಕೊಡಿಸಿದ್ದೇವೆ. ಮುಂದಿನ ಕೆಲಸ ರಾಜ್ಯ ಸರ್ಕಾರದ್ದು. ಆ ಕೆಲಸವನ್ನೂ ಮಾಡಿಸಿಕೊಳ್ಳೋಕೆ ಆಗೋದಿಲ್ಲವೇ? ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಕೆಲಸ ಮಾಡೋಕೆ ಆಗುತ್ತೆ ಅನ್ನೋದಾದ್ರೆ ಮಾಡಿ, ಇಲ್ಲಾಂದ್ರೆ ರಾಜೀನಾಮೆ ಕೊಟ್ಟು ಹೋಗಿ, ಆ ಕೆಲಸವನ್ನೂ ನಾವೇ ಮಾಡುತ್ತೇವೆ ಎಂದು ತಿರುಗೇಟು ಕೊಟ್ಟಿದ್ದಾರೆ.

ಸಿದ್ದರಾಮಯ್ಯ, ಸೋನಿಯಾ ಗಾಂಧಿ ಕರೆದರು ಎಂದು ದೆಹಲಿಗೆ ಬರುತ್ತಾರೆ. ಆದರೆ, ಪ್ರಧಾನಿಯನ್ನು ನೋಡಲು ಹೋಗುತ್ತಿದ್ದೇನೆ ಎಂದು ಹೇಳ್ತಾರೆ. ಇಲ್ಲಿ, ಯಾರಿಗೂ ವಿಷಯವೇ ಗೊತ್ತಿರಲ್ಲ. ಸಿದ್ದರಾಮಯ್ಯನವರಿಗೆ ಕೇಂದ್ರವನ್ನು ಟೀಕಿಸುವುದೇ ಕೆಲಸವಾಗಿದೆ ಎಂದು ತಿರುಗೇಟು ಕೊಟ್ಟಿದ್ದಾರೆ.