ಎಲ್ಲ ದೇಶಗಳಲ್ಲೂ ಚುನಾವಣೆಗಳು ನಡೆಯುತ್ತವೆ. ಭಾರತದಲ್ಲಂತೂ ಪ್ರತಿ ವರ್ಷ ಒಂದಲ್ಲಾ ಒಂದು ಚುನಾವಣೆಗಳು ನಡೆದೇ ನಡೆಯುತ್ತವೆ. ಇಲ್ಲಿ ಕಣಕ್ಕೆ ನಿಂತ ಅಭ್ಯರ್ಥಿಗಳು ಜನರಿಂದ ಮತ ಸೆಳೆಯಲು ಏನೆಲ್ಲಾ ತಂತ್ರ ಪ್ರತಿತಂತ್ರ ಹೆಣೆಯುತ್ತಾರೆ. ಆದರೆ ಮತ ಪ್ರಚಾರದ ವೇಳೆ ಅಬ್ಬರದ ಮಾತುಗಳನ್ನಾಡುವುದಕ್ಕಿಂತ ನಗುಮೊಗದಿಂದ ಮತ ಕೇಳುವ ರಾಜಕಾರಣಿಗಳಿಗೆ ಹೆಚ್ಚು ಓಟು ಬೀಳುತ್ತವೆ ಎಂದು ಸಮೀಕ್ಷೆಯೊಂದು ಹೇಳಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜಪಾನ್‌ ರಾಜಧಾನಿ ಟೋಕಿಯೋದಲ್ಲಿರುವ ತಕುಶೋಕು ವಿಶ್ವವಿದ್ಯಾಲಯ ಚುನಾವಣೆಗೆ ಸ್ಪರ್ಧಿಸಿದ್ದ 6000 ಪ್ರತಿನಿಧಿಗಳನ್ನು ಅವರ ಮುಖಭಾವ ಆಧರಿಸಿ ಅಧ್ಯಯನ ಮಾಡಿದೆ. ಅದನ್ನು 1980-2017ರ ನಡುವೆ ನಡೆದ 6 ಚುನಾವಣೆಗಳೊಂದಿಗೆ ಹೋಲಿಕೆ ಮಾಡಿ ರಾಜಕಾರಣಿಗಳ ನಗು ಹೇಗೆ ಮತ ತಂದುಕೊಡುತ್ತದೆ ಎಂಬ ಬಗ್ಗೆ ಅಧ್ಯಯನ ಮಾಡಿದೆ.

ಇದರಲ್ಲಿ ಹಸನ್ಮುಖಿಯಾಗಿ ಮತದಾರರ ಬಳಿ ಮತಯಾಚಿಸಿದವರು ಅತಿ ಹೆಚ್ಚು ಸಂಖ್ಯೆಯಲ್ಲಿ ಗೆದ್ದಿದ್ದರು ಎಂದು ಸಮೀಕ್ಷೆ ಹೇಳುತ್ತದೆ. ಅಂದರೆ ಮತಹಾಕಿ ಜನಪ್ರತಿಧಿಗಳನ್ನಾಗಿ ಆಯ್ಕೆ ಮಾಡುವ ಮತದಾರೊಟ್ಟಿಗೆ ಒಳ್ಳೆಯ ಸಂಪರ್ಕ ಬೆಳೆಸಿಕೊಳ್ಳಲು ನಗು ಒಂದು ಸೇತುವೆಯಾಗುತ್ತದೆ.

ಅಲ್ಲದೆ ಸಾಮಾನ್ಯ ಜನರಲ್ಲಿ ನಮ್ಮನ್ನೂ ಆ ರಾಜಕಾರಣಿ ಗುರುತಿಸಿದರು ಎಂಬ ಭಾವನೆ ಬೆಳೆಯುತ್ತದೆ. ಅವರಿಗೆ ಮತ ನೀಡಿದರೆ ಗೆದ್ದ ಮೇಲೆ ನಮ್ಮನ್ನು ಅಲ್ಲಗಳೆಯುವುದಿಲ್ಲ ಎಂಬ ನಂಬಿಕೆ ಹುಟ್ಟುತ್ತದೆ ಎಂದು ಸಮೀಕ್ಷರು ಅಭಿಪ್ರಾಯ ಪಟ್ಟಿದ್ದಾರೆ. ಹಾಗಂತ ಎಂತಹಾ ಗಂಭೀರ ಚರ್ಚೆಯ ಸಂದರ್ಭದಲ್ಲೂ ನಗುಮುಖದಿಂದ ಇರಬಾರದು ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.