ತಮಿಳುನಾಡಿನಲ್ಲಿ ಮತ್ತೆ ಹೈಡ್ರಾಮಾ ನಡೆಯುತ್ತಿದೆ. ನಿನ್ನೆಯಷ್ಟೇ ಎಐಎಡಿಎಂಕೆ ಎರಡು ಬಣಗಳು ವಿಲೀನಗೊಂಡಿದ್ದವು, ಅಲ್ಲದೆ ಶಶಿಕಲಾರನ್ನು ಎಐಎಡಿಎಂಕೆ ಪಕ್ಷದಿಂದ ಉಚ್ಛಾಟನೆ ನಿರ್ಧರಿಸಿತ್ತು. ಇದರ ಬೆನ್ನಲ್ಲೇ ಶಶಿಕಲಾ ಸಂಬಂಧಿ ಟಿಟಿವಿ ದಿನಕರನ್ ಸಿಎಂ ಪಳನಿಸ್ವಾಮಿಗೆ ಶಾಕ್ ಕೊಡಲು ಮುಂದಾಗಿದ್ದಾರೆ.

ಚೆನ್ನೈ(ಆ.22): ತಮಿಳುನಾಡಿನಲ್ಲಿ ಮತ್ತೆ ಹೈಡ್ರಾಮಾ ನಡೆಯುತ್ತಿದೆ. ನಿನ್ನೆಯಷ್ಟೇ ಎಐಎಡಿಎಂಕೆ ಎರಡು ಬಣಗಳು ವಿಲೀನಗೊಂಡಿದ್ದವು, ಅಲ್ಲದೆ ಶಶಿಕಲಾರನ್ನು ಎಐಎಡಿಎಂಕೆ ಪಕ್ಷದಿಂದ ಉಚ್ಛಾಟನೆ ನಿರ್ಧರಿಸಿತ್ತು. ಇದರ ಬೆನ್ನಲ್ಲೇ ಶಶಿಕಲಾ ಸಂಬಂಧಿ ಟಿಟಿವಿ ದಿನಕರನ್, ಸಿಎಂ ಪಳನಿಸ್ವಾಮಿಗೆ ಶಾಕ್ ಕೊಡಲು ಮುಂದಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಟಿಟಿವಿ ದಿನಕರನ್ ಬೆಂಬಲಿತ 22 ಶಾಸಕರು ಬೆಂಬಲ ವಾಪಸ್ ಪಡೆದಿದ್ದಾರೆ. ಸಿಎಂ ಪಳನಿಸ್ವಾಮಿಗೆ ನೀಡಿದ್ದ ಬೆಂಬಲವನ್ನು ವಾಪಸ್​ ಪಡೆಯುವುದಾಗಿ ರಾಜ್ಯಪಾಲ ವಿದ್ಯಾಸಾಗರ್​ ರಾವ್'​ಗೆ ಪತ್ರ ಸಲ್ಲಿಸಿದ್ದಾರೆ. ಇದರಿಂದ ತಮಿಳುನಾಡಿನ ಎಐಎಡಿಎಂಕೆ ಸರ್ಕಾರಕ್ಕೆ ಮತ್ತೆ ಸಂಕಷ್ಟ ಎದುರಾಗಿದೆ.