ಶಾಸಕ ಸ್ಥಾನದಿಂದ ಅನರ್ಹಗೊಂಡ ಕೆ.ಆರ್.ಪುರದ ಬೈರತಿ ಬಸವರಾಜ್ ನೆರವಿಗೆ ಬಿಜೆಪಿ ನಾಯಕರು ನಿಂತರೆ? ಹೀಗೊಂದು ಪ್ರಶ್ನೆ ಸಹಜವಾಗಿ ಎದ್ದೇಳುವ ಬೆಳವಣಿಗೆ ನಡೆದಿದೆ.
ಬೆಂಗಳೂರು[ಆ. 02] ಬಿಜೆಪಿ ನಾಯಕರ ಜತೆ ಕಾಣಿಸಿಕೊಂಡ ಅನರ್ಹ ಶಾಸಕ ಬೈರತಿ ಬಸವರಾಜ್ ಕಾಣಿಸಿಕೊಂಡಿದ್ದಾರೆ. ಕ್ಷೇತ್ರದ ಅನುದಾನಕ್ಕಾಗಿ ಬಿಜೆಪಿ ಮೊರೆ ಹೋದ ಬೈರತಿ ಬಸವರಾಜು. ಬಿಬಿಎಂಪಿಯಿಂದ ಅನುದಾನ ಪಡೆಯಲು ಬಿಜೆಪಿ ಸಹಾಯ ಪಡೆದಿಕೊಳ್ಳಲು ಮುಂದಾಗಿದ್ದಾರೆ.
ಬೈರತಿ ಬಸವರಾಜು ಕ್ಷೇತ್ರ ವ್ಯಾಪ್ತಿಗೆ ಅನುದಾನ ನೀಡುವಂತೆ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಶಿಫಾರಸು ಮಾಡಿದ್ದಾರೆ. ಕೆ.ಅರ್.ಪುರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದ ಭೈರತಿ ಬಸವರಾಜ್ ದೋಸ್ತಿ ಸರ್ಕಾರದ ನಡಾವಳಿಗೆ ಬೇಸತ್ತು ರಾಜೀನಾಮೆ ಕೊಟ್ಟಿದ್ದರು.
ಅಂದಿನ ಸ್ಪೀಕರ್ ರಮೇಶ್ ಕುಮಾರ್ ರಾಜೀನಾಮೆ ಕೊಟ್ಟಿದ್ದ ಎಲ್ಲ ಶಾಸಕರನ್ನು ಅನರ್ಹಗೊಳಿಸಿದ್ದರು. ಬೈರತಿ ಬಸವರಾಜ್ ಸಹ ಶಾಸಕ ಸ್ಥಾನ ಕಳೆದುಕೊಂಡಿದ್ದರು.
