ಈ ನಡುವೆ ಝೆಲಿಯಾಂಗ್ ಕೂಡ ರಾಜ್ಯಪಾಲ ಪಿ.ಬಿ. ಆಚಾರ್ಯ ಅವರಿಗೆ ಪತ್ರ ಬರೆದಿದ್ದು, ತಮಗೆ 30 ಎನ್'ಪಿಎಫ್ ಶಾಸಕರು ಹಾಗೂ 7 ಸ್ವತಂತ್ರ ಶಾಸಕರ ಬೆಂಬಲವಿದ್ದು, ಸರ್ಕಾರ ರಚಿಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಕೊಹಿಮಾ(ಜು.09): ನಾಗಲ್ಯಾಂಡ್'ನಲ್ಲಿ ಕೇವಲ 4 ತಿಂಗಳ ಅವಧಿಯಲ್ಲಿ ಮತ್ತೆ ರಾಜಕೀಯ ಅಸ್ಥಿರತೆ ಉಂಟಾಗಿದ್ದು, ಮುಖ್ಯಮಂತ್ರಿ ವಿರುದ್ಧ 30ಕ್ಕೂ ಹೆಚ್ಚು ಶಾಸಕರು ಬಂಡೆದಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ಮಾಜಿ ಮುಖ್ಯಮಂತ್ರಿ ಟಿ.ಆರ್. ಝೆಲಿಯಾಂಗ್ ಅವರ ವಿರುದ್ಧ ಸ್ವಪಕ್ಷ ನಾಗ ಪೀಪಲ್ಸ್ ಫ್ರಂಟ್ ಶಾಸಕರು ತಿರುಗಿಬಿದ್ದ ಕಾರಣ ಡಾ. ಶುರ್ಹೋಲ್ಜೀ ಲೈಝೆಟ್ಸು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಈಗ ಝೆಲಿಯಾಂಗ್ ಅವರಿಗಾದ ಸ್ಥಿತಿಯೇ ಶುರ್ಹೋಲ್ಜೀ'ಗೂ ಒದಗಿ ಬಂದಿದೆ.ಎನ್'ಪಿಎಫ್'ನ 30ಕ್ಕೂ ಹೆಚ್ಚು ಶಾಸಕರು ಅಸ್ಸಾಂ'ನ ಕಾಜಿರಂಗಾ ರಾಷ್ಟ್ರೀಯ ಉದ್ಯಾನದ ಸಮೀಪವಿರುವ ರೆಸಾರ್ಟ್'ನಲ್ಲಿ ವಾಸ್ತವ್ಯ ಹೂಡಿದ್ದು, ಮಾಜಿ ಮುಖ್ಯಮಂತ್ರಿ ಝೆಲಿಯಾಂಗ್ ಅವರನ್ನೆ ಬೆಂಬಲಿಸುವುದಾಗಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಈ ನಡುವೆ ಝೆಲಿಯಾಂಗ್ ಕೂಡ ರಾಜ್ಯಪಾಲ ಪಿ.ಬಿ. ಆಚಾರ್ಯ ಅವರಿಗೆ ಪತ್ರ ಬರೆದಿದ್ದು, ತಮಗೆ 30 ಎನ್'ಪಿಎಫ್ ಶಾಸಕರು ಹಾಗೂ 7 ಸ್ವತಂತ್ರ ಶಾಸಕರ ಬೆಂಬಲವಿದ್ದು, ಸರ್ಕಾರ ರಚಿಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಹಾಲಿ ಮುಖ್ಯಮಂತ್ರಿ ಡಾ. ಶುರ್ಹೋಲ್ಜೀ ಲೈಝೆಟ್ಸು ನಾಲ್ವರು ಸಚಿವರು ಒಳಗೊಂಡಂತೆ 10 ಮಂದಿ ಶಾಸಕರನ್ನು ಪಕ್ಷದಿಂದ ಉಚ್ಚಾಟಿಸಿದ ನಂತರ ಆಂತರಿಕ ಕಲಹ ಏರ್ಪಟ್ಟಿದೆ. ಅಲ್ಲದೆ ಇವೆಲ್ಲ ಕಾರಣಗಳಿಗೆ 4 ವರ್ಷದ ಹಿಂದೆ ಪಕ್ಷದಿಂದ ಉಚ್ಚಾಟನೆಗೊಂಡಿದ್ದ ಹಾಲಿ ಸಂಸದ ಹಾಗೂ ಮಾಜಿ ಸಂಸದ ನೀಫಿಯು ರಿಯೊ ಅವರೆ ಕಾರಣ ಎನ್ನಲಾಗಿದೆ.
