ಕಬ್ಬನ್ ಪಾರ್ಕ್​ಗೆ ಹೋಗುವ ಪ್ರೇಮಿಗಳು ಇನ್ಮುಂದೆ ತುಂಬಾ ಎಚ್ಚರದಿಂದ ಇರಬೇಕು. ಯಾಕಂದ್ರೆ ಕಬ್ಬನ್​ ಪಾರ್ಕನಲ್ಲಿ ಪ್ರೇಮಿಗಳ ಚೆಲ್ಲಾಟದ ಮೇಲೆ ಕಣ್ಗಾವಲಿದೆ.  

ಬೆಂಗಳೂರು (ಸೆ.25): ಕಬ್ಬನ್ ಪಾರ್ಕ್​ಗೆ ಹೋಗುವ ಪ್ರೇಮಿಗಳು ಇನ್ಮುಂದೆ ತುಂಬಾ ಎಚ್ಚರದಿಂದ ಇರಬೇಕು. ಯಾಕಂದ್ರೆ ಕಬ್ಬನ್​ ಪಾರ್ಕನಲ್ಲಿ ಪ್ರೇಮಿಗಳ ಚೆಲ್ಲಾಟದ ಮೇಲೆ ಕಣ್ಗಾವಲಿದೆ.

ಅನೈತಿಕ ಚಟುವಟಿಕೆಗೆ ಬ್ರೇಕ್​ ಹಾಕಲು ಅಧಿಕಾರಿಗಳು ಸಿಸಿಟಿವಿ ಅಳವಡಿಸಲು ನಿರ್ಧರಿಸಿದ್ದಾರೆ. 300 ಎಕರೆ ವಿಸ್ತೀರ್ಣದ ಕಬ್ಬನ್ ಪಾರ್ಕ್​ಗೆ ಸಿಸಿಟಿವಿ ಕ್ಯಾಮರಾ, ಎಲ್​ಇಡಿ ಲೈಟ್ಸ್, ಆಡಿಯೋ ಸಿಸ್ಟಮ್​ ಅಳವಡಿಕೆಗೆ ಅಧಿಕಾರಿಗಳು ನಿರ್ಧರಿಸಿದ್ದಾರೆ. ಸಿಸಿಟಿವಿ ಜೊತೆ ಅನೈತಿಕ ಚಟುವಟಿಕೆ ಕಂಡುಬಂದರೆ ಮೈಕ್​​​​ನಲ್ಲಿ ಎಚ್ಚರಿಕೆ ನೀಡಲಾಗುತ್ತೆ. ಮಹಿಳೆಯರ ರಕ್ಷಣಾ ದೃಷ್ಟಿಯಿಂದ ಪೊಲೀಸರು ಈ ಕ್ರಮಕ್ಕೆ ಮುಂದಾಗಿದ್ದಾರೆ. ಈ ಸಿಸಿಟಿವಿ ರೂಲ್ಸ್​ ಕೆಲವೇ ದಿನಗಳಲ್ಲಿ ಜಾರಿಗೆ ಬರಲಿದೆ.