ಒಂದು ವರ್ಗದಲ್ಲಿ ಒಳ್ಳೆದು ಕೆಟ್ಟದ್ದು ಇರುವಂತೆ ಪೊಲೀಸ್​ ಇಲಾಖೆಯಲ್ಲೂ ಆ ತರಹದ ವ್ಯಕ್ತಿತ್ವದವರು ಇದ್ದಾರೆ ಎನ್ನುವುದಕ್ಕೆ ಈ ಒಂದು ಘಟನೆ ಸಾಕ್ಷಿ. ತಪ್ಪು ಮಾಡಿದವರನ್ನು ತಿದ್ದುವ ಜವಾಬ್ದಾರಿ ಪೊಲೀಸರಿಗೆ ನೀಡಿದೆ. ಆದರೆ ಪೊಲೀಸರೇ ದೌರ್ಜ್ಯನ್ಯಕ್ಕೆ ನಿಂತರೆ? ಈ ಘಟನೆ ಸತ್ಯ ಎಂದಾದಲ್ಲಿ  ಆರಕ್ಷಕರು ತಲೆ ತಗ್ಗಿಸಲೇಬೇಕಾಗುತ್ತೆ. ಭ್ರಷ್ಟರನ್ನೇ ಬಲೆಗೆ ಬೀಳಿಸಬೇಕಿದ್ದ ಪೊಲೀಸರೇ ಭ್ರಷ್ಟಾಚಾರಕ್ಕಿಳಿದರೆ ಯಾರು ತಾನೆ ಪೊಲೀಸರಿಗೆ ಗೌರವ ಕೊಡುತ್ತಾರೆ. ಅಷ್ಟಕ್ಕೂ ಈಗ ಇಂಥದ್ದೊಂದು ಕಳಂಕ ಕೇಳಿ ಬಂದಿದ್ದು  ಬೆಂಗಳೂರಿನ ಜಯನಗರ ಠಾಣೆ ಪಿಎಸ್​ಐ  ಜಯನಗರ ಪಿ ಎಸ್​ ಐ  ಶಿವಕುಮಾರ್

ಬೆಂಗಳೂರು(ಡಿ.18): ಒಂದು ವರ್ಗದಲ್ಲಿ ಒಳ್ಳೆದು ಕೆಟ್ಟದ್ದು ಇರುವಂತೆ ಪೊಲೀಸ್​ ಇಲಾಖೆಯಲ್ಲೂ ಆ ತರಹದ ವ್ಯಕ್ತಿತ್ವದವರು ಇದ್ದಾರೆ ಎನ್ನುವುದಕ್ಕೆ ಈ ಒಂದು ಘಟನೆ ಸಾಕ್ಷಿ. ತಪ್ಪು ಮಾಡಿದವರನ್ನು ತಿದ್ದುವ ಜವಾಬ್ದಾರಿ ಪೊಲೀಸರಿಗೆ ನೀಡಿದೆ. ಆದರೆ ಪೊಲೀಸರೇ ದೌರ್ಜ್ಯನ್ಯಕ್ಕೆ ನಿಂತರೆ? ಈ ಘಟನೆ ಸತ್ಯ ಎಂದಾದಲ್ಲಿ ಆರಕ್ಷಕರು ತಲೆ ತಗ್ಗಿಸಲೇಬೇಕಾಗುತ್ತೆ. ಭ್ರಷ್ಟರನ್ನೇ ಬಲೆಗೆ ಬೀಳಿಸಬೇಕಿದ್ದ ಪೊಲೀಸರೇ ಭ್ರಷ್ಟಾಚಾರಕ್ಕಿಳಿದರೆ ಯಾರು ತಾನೆ ಪೊಲೀಸರಿಗೆ ಗೌರವ ಕೊಡುತ್ತಾರೆ. ಅಷ್ಟಕ್ಕೂ ಈಗ ಇಂಥದ್ದೊಂದು ಕಳಂಕ ಕೇಳಿ ಬಂದಿದ್ದು ಬೆಂಗಳೂರಿನ ಜಯನಗರ ಠಾಣೆ ಪಿಎಸ್​ಐ ಜಯನಗರ ಪಿ ಎಸ್​ ಐ ಶಿವಕುಮಾರ್

ನವೆಂಬರ್ 27ರಂದು ಜಯನಗರ ಪೊಲೀಸ್​ ಠಾಣೆಯಲ್ಲಿ ಯೋಗೇಶ್​ ಎಂಬಾತ ಕಾಣೆಯಾಗಿದ್ದಾನೆ ಎನ್ನುವ ನಾಪತ್ತೆ ಪ್ರಕರಣ ದಾಖಲಾಗಿತ್ತು. ಪಿಎಸ್'ಐ ಶಿವಕುಮಾರ್​ ನೇತೃತ್ವದಲ್ಲಿ ತನಿಖೆ ಬೆನ್ನತ್ತಿದಾಗ ಯೋಗೇಶ್​ ಹುಡುಗಿ ವಿಚಾರವಾಗಿ ಫಾರ್ಮ್​ ಹೌಸ್​'ನಲ್ಲಿ ಭೀಕರವಾಗಿ ಕೊಲೆಯಾಗಿದ್ದ ಎನ್ನುವುದು ಖಚಿತವಾಗಿತ್ತು. ಈ ಪ್ರಕರಣದಲ್ಲಿ ಬಂಧನವಾಗಿದ್ದು, ಪ್ರತಾಪ್.

ಈ ಪ್ರಕರಣ ತನಿಖೆ ನಡೆಸುತ್ತಿದ್ದ ಪಿಎಸ್ಐ ಶಿವಕುಮಾರ್​ ಪ್ರತಾಪ್'​ನಿಂದ 80 ಸಾವಿರ ನಗದು ಸೇರಿ ಒಂದಷ್ಟು ವಸ್ತು ತೆಗೆದುಕೊಂಡಿದ್ದರಂತೆ . ಅಷ್ಟೇ ಅಲ್ಲದೆ ಪ್ರತಾಪ್​ ಬಳಿ ಇದ್ದ ಕೆನರಾ ಬ್ಯಾಂಕ್​ ಎಟಿಎಂ ಕಾರ್ಡ್​ ತೆಗೆದುಕೊಂಡು ಗನ್'​ನಿಂದ ಶೂಟ್​ ಮಾಡುವುದಾಗಿ ಬೆದರಿಸಿ ಪಿನ್​ಕೋಡ್ ಪಡೆದು ಪಿಎಸ್​ಐ ಶಿವಕುಮಾರ್ 1 ಲಕ್ಷದ 60 ಸಾವಿರ ಹಣ ಡ್ರಾ ಮಾಡಿಕೊಂಡಿದ್ದಾರೆ ಎನ್ನುವುದು ಪ್ರತಾಪ್ ತಂದೆ ಶಿವಕುಮಾರ್​ ಆರೋಪ .

ಹಣ ಡ್ರಾ ಮಾಡಿಕೊಂಡ ಬ್ಯಾಂಕ್​ ಡಾಕ್ಯೂಮೆಂಟ್​ ಸಮೇತ ಪಿಎಸ್​ಐ ವಿರುದ್ಧ ಪ್ರತಾಪ್ ತಂದೆ ಕಮೀಷನರ್'​ಗೆ ದೂರು ನೀಡಿದ್ದಾರೆ. ಆರೋಪಿಯಿಂದಲೇ ಪಿಎಸ್​ಐ ದೋಚಿದ ಪ್ರಕರಣವೀಗ ಕಮಿಷನರ್ ಕಚೇರಿ ತಲುಪಿದೆ. ಇದರ ತನಿಖೆ ಬಳಿಕವಷ್ಟೇ ಸತ್ಯಾಸತ್ಯತೆ ಹೊರಬರಬೇಕಿದೆ. ಆರೋಪ ನಿಜವೇ ಆಗಿದ್ದಲ್ಲಿ ಪೊಲೀಸ್ ಇಲಾಖೆಗೇ ಕಪ್ಪು ಚುಕ್ಕೆಯಾಗಲಿದೆ.