ದುಷ್ಕರ್ಮಿಗಳು ತಾವು ನಟಿಯ ಮೇಲೆ ದೌರ್ಜನ್ಯ ನಡೆಸುತ್ತಿರುವುದರ ಚಿತ್ರಗಳನ್ನು ಮೊಬೈಲ್‌'ನಲ್ಲಿ ಸೆರೆಹಿಡಿದಿರುವ, ಕೃತ್ಯ ಬಹಿರಂಗಪಡಿಸಿದರೆ ಆ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವುದಾಗಿ ಬೆದರಿಕೆ ಹಾಕಿರುವ  ವಿಷಯಗಳನ್ನು ಕೊಚ್ಚಿ ಪೊಲೀಸರು ನಿರಾಕರಿಸಿದ್ದಾರೆ.

ಎರ್ನಾಕುಲಂ (ಫೆ.19): ಖ್ಯಾತ ಮಳಯಾಳಂ ನಟಿ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಕೇರಳ ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಅಪಹರಣದ ಹಿಂದೆ ಚಿತ್ರತಂಡದ ಕೆಲವರ ಕೈವಾಡವಿದೆ ಎಂದು ಹೇಳಲಾಗುತ್ತಿದ್ದು, ಪೊಲೀಸರು ನಟಿ ಕಾರು ಚಾಲಕ ಮಾರ್ಟಿನ್ ಎಂಬಾತನನ್ನು ಬಂಧಿಸಿದ್ದಾರೆ.

ಶುಕ್ರವಾರ ಚಿತ್ರದ ಚಿತ್ರೀಕರಣ ಮುಗಿಸಿದ ನಟಿ , ಚಿತ್ರ ತಂಡ ಒದಗಿಸಿದ್ದ ಕಾರ್‌'ನಲ್ಲಿ ಕೊಚ್ಚಿಗೆ ಹೊರಟಿದ್ದಾರೆ. ಆ ಕಾರ್‌ನ್ನು ಮಾರ್ಟಿನ್ ಚಲಾಯಿಸುತ್ತಿದ್ದು, ರಾತ್ರಿ 9ರ ವೇಳೆ ದಾರಿ ಮಧ್ಯೆ ಅಪಘಾತ ನಡೆದಿದೆ.

ಅಪಘಾತವಾದ ಕೆಲವೇ ನಿಮಿಷಗಳಲ್ಲಿ ಅಲ್ಲಿ ನಿಂತಿದ್ದ ಬೇರೊಂದು ಕಾರ್‌'ನಿಂದ ನಾಲ್ವರನ್ನು ಮಾರ್ಟಿನ್ ತನ್ನ ಕಾರಿಗೆ ಹತ್ತಿಸಿಕೊಂಡಿದ್ದಾನೆ. ಆ ನಾಲ್ವರೂ ಚಿತ್ರ ತಂಡದವರು ಎಂದು ಹೇಳಲಾಗುತ್ತಾ ಇದ್ದು . ನಂತರ ಅವರು ಪಳರಿವಟ್ಟಂ ಎಂಬಲ್ಲಿ ಇಳಿದುಕೊಂಡಿದ್ದಾರೆ. ನಂತರ ಮಾರ್ಟಿನ್, ನಟಿಯನ್ನು ಅವರ ಮನೆಯ ಬಳಿ ಬಿಟ್ಟಿದ್ದಾನೆ. ಆ ನಂತರ ನಟಿ ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸರು ಈಗಾಗಲೇ ಚಾಲಕ ಮಾರ್ಟಿನ್ ಅನ್ನು ಬಂಧಿಸಿದ್ದಾರೆ. ಆತ ಕೃತ್ಯದಲ್ಲಿ ತಾನೂ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾನೆ’ ಎಂದು ತಿಳಿದುಬಂದಿದೆ.

ದುಷ್ಕರ್ಮಿಗಳು ತಾವು ನಟಿಯ ಮೇಲೆ ದೌರ್ಜನ್ಯ ನಡೆಸುತ್ತಿರುವುದರ ಚಿತ್ರಗಳನ್ನು ಮೊಬೈಲ್‌'ನಲ್ಲಿ ಸೆರೆಹಿಡಿದಿದ್ದಾರೆ. ಕೃತ್ಯ ಬಹಿರಂಗಪಡಿಸಿದರೆ ಆ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಆದರೆ ಇವೆಲ್ಲವನ್ನೂ ಕೊಚ್ಚಿ ಪೊಲೀಸರು ನಿರಾಕರಿಸಿದ್ದಾರೆ.